ಮೈಸೂರು:ಈ ಬಾರಿ ಚಿಕ್ಕದಾಗಿ ಚೊಕ್ಕವಾಗಿ ನಡೆದ ಜಂಬೂಸವಾರಿಯಲ್ಲಿ ಅಭಿಮನ್ಯು ಆನೆ ತನಗೆ ವಹಿಸಿದ್ದ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ಬಹಳ ಸಂತೋಷವಾಗಿದೆ ಎಂದು ಡಿಸಿಎಫ್ ಅಲೆಗ್ಸಾಂಡರ್ ಅಭಿಪ್ರಾಯಪಟ್ಟಿದ್ದಾರೆ.0
'ಅಭಿಮನ್ಯು' ತನಗೆ ವಹಿಸಿದ್ದ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾನೆ: ಡಿಸಿಎಫ್ ಅಲೆಗ್ಸಾಂಡರ್ - ಮೈಸೂರು ದಸರಾ ಅಭಿಮನ್ಯು
ಇದೇ ವರ್ಷ ಡಿಸೆಂಬರ್ನಲ್ಲಿ ನಿವೃತ್ತರಾಗಲಿರುವ ಡಿಸಿಎಫ್ ಅಲೆಗ್ಸಾಂಡರ್ ತಮ್ಮ ನಿವೃತ್ತಿ ವರ್ಷದ ಕೊನೆಯ ದಸರಾವನ್ನು ಯಶಸ್ವಿಯಾಗಿ ನಡೆಸಿದಕ್ಕೆ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಇಂದು ಅರಮನೆಯಲ್ಲಿ ನಡೆದ ಗಜಪಡೆ ಪೂಜಾ ಕಾರ್ಯಕ್ರಮದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಫ್ ಅಲೆಗ್ಸಾಂಡರ್. ಈ ಬಾರಿ ವಿಶಿಷ್ಟವಾಗಿ ನಡೆದ ದಸರಾದಲ್ಲಿ, ಅಭಿಮನ್ಯು ಆನೆ ಅಂಬಾರಿಯನ್ನು ಹೊತ್ತು ಹೆಜ್ಜೆ ಹಾಕಿದ್ದು, ಅದಕ್ಕೆ ಒಪ್ಪಿಸಿದ ಕರ್ತವ್ಯವನ್ನು ಪೂರ್ಣವಾಗಿ ಯಶಸ್ವಿಯಾಗಿ ನಿರ್ವಹಿಸಿದ್ದಾನೆ.
ಒಂದು ತಿಂಗಳ ಅರಮನೆ ವಾಸ ಮುಗಿಸಿಕೊಂಡ ಗಜಪಡೆ ನಾಳೆ ತಮ್ಮ ತಮ್ಮ ಕಾಡಿಗೆ ಹೋಗುತ್ತಾರೆ. ಇದೇ ವರ್ಷ ಡಿಸೆಂಬರ್ನಲ್ಲಿ ನಿವೃತ್ತರಾಗಲಿರುವ ಡಿಸಿಎಫ್ ಅಲೆಗ್ಸಾಂಡರ್ ತಮ್ಮ ನಿವೃತ್ತಿ ವರ್ಷದ ಕೊನೆಯ ದಸರಾವನ್ನು ಯಶಸ್ವಿಯಾಗಿ ನಡೆಸಿದಕ್ಕೆ ಎಲ್ಲರಿಗೂ ಧನ್ಯವಾದ ಅರ್ಪಿಸಿದರು..