ಮೈಸೂರು: ಕೋವಿಡ್ ಸೋಂಕಿಗೆ ಒಳಗಾದ ತಕ್ಷಣ ಭಯಪಡುವವರು ಹೆಚ್ಚು ಇಂತಹ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಆತ್ಮವಿಶ್ವಾಸ ಮೂಡಿಸಲು ನಿತ್ಯ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ವ್ಯಾಯಾಮ, ಡ್ಯಾನ್ಸ್ ಮೂಲಕ ನೃತ್ಯ ಥೆರಪಿ ಮಾಡಿಸಿ ಅವರನ್ನು ಬೇಗ ಗುಣಮುಖರಾಗಿ ಮಾಡುತ್ತಿದ್ದಾರೆ.
ಸೋಂಕಿತರಿಗೆ ನೃತ್ಯ ಥೆರಪಿ ಮೂಲಕ ಚಿಕಿತ್ಸೆ ಓದಿ: ಸಿಎಂ ಬದಲಾವಣೆ ನಿರ್ಧಾರ ಹೈಕಮಾಂಡ್ಗೆ ಬಿಟ್ಟದ್ದು: ಶಾಸಕ ಅಪ್ಪಚ್ಚು ರಂಜನ್
ಪಾಸಿಟಿವ್ ಜೊತೆಗೆ ಇತರ ರೋಗಗಳು ಇರುವ ಸೋಂಕಿತರು ಕೋವಿಡ್ ಜಿಲ್ಲಾ ಆಸ್ಪತ್ರೆಗೆ ಬಂದರೆ, ಕೋವಿಡ್ ನಿಂದ ಗುಣಮುಖರಾಗಲು ಕನಿಷ್ಠ 10 ರಿಂದ 15 ದಿನಗಳು ಬೇಕು. ಆ ಸಂದರ್ಭದಲ್ಲಿ ಸೋಂಕಿತರು ಬೆಡ್ ಮೇಲೆ ಮಲಗಿರುವುದರಿಂದ ದೇಹದ ರಕ್ತ ಚಲನೆಯು ಕಡಿಮೆಯಾಗಿತ್ತದೆ. ಜೀವನ ಬೇಡ ಎಂಬ ನಿರುತ್ಸಾಹ ಉಂಟಾಗುತ್ತದೆ. ಇಂತಹ ಸೋಂಕಿತರಲ್ಲಿ ಆತ್ಮ ವಿಶ್ವಾಸ ಹಾಗೂ ಜೀವನದ ಉತ್ಸಾಹ ತುಂಬಲು ವಾರ್ಡ್ ನಲ್ಲಿ ವ್ಯಾಯಾಮ ಹಾಗೂ ಗೀತೆಗಳಿಗೆ ಡ್ಯಾನ್ಸ್ ಮಾಡುವ ಮೂಲಕ ಅವರಿಗೆ ಗೊತ್ತಾಗದ ರೀತಿಯಲ್ಲಿ ಜೀವನದ ಬಗ್ಗೆ ಉತ್ಸಾಹ ಮೂಡುತ್ತದೆ.
ಜಿಲ್ಲಾ ಆಸ್ಪತ್ರೆಯಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳನ್ನು ಕೈ - ಹಿಡಿದು ಇಲ್ಲಿನ ನರ್ಸಿಂಗ್ ವಿದ್ಯಾರ್ಥಿಗಳ ಸಹಕಾರದಿಂದ ನಿತ್ಯ ಥೆರಪಿ ನಡೆಯುತ್ತದೆ. ಕೋವಿಡ್ ಸೋಂಕಿತರು ಬೇಗ ಗುಣಮುಖವಾಗಲು ವ್ಯಾಯಾಮ ಮತ್ತು ನೃತ್ಯ ಸಹಕಾರಿಯಾಗಿದ್ದು, ಈ ಸಂದರ್ಭದಲ್ಲಿ ಸೋಂಕಿತರ ಮುಖದಲ್ಲಿ ನಗು ಕಾಣಿಸುತ್ತದೆ ಬೇಗ ಗುಣಮುಖರಾಗಲು ಸಹಾಯವಾಗುತ್ತದೆ ಎನ್ನುತ್ತಾರೆ ಜಿಲ್ಲಾಸ್ಪತ್ರೆಯ ಇಎಟಿ ತಜ್ಞ ಡಾ.ಎ.ಎನ್.ಪದ್ಮಾ.
ನರ್ಸಿಂಗ್ ನ ಅಂತಿಮ ವರ್ಷದ ವಿದ್ಯಾರ್ಥಿಗಳು ಈ ಕೋವಿಡ್ ಕೇರ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದು, ಇವರುಗಳು ನೃತ್ಯ ಥೆರಪಿಯಲ್ಲಿ ಪಿಪಿಇ ಕಿಟ್ ಧರಿಸಿ ಸೋಂಕಿತರ ಜೊತೆ ಡ್ಯಾನ್ಸ್ ಮಾಡುವುದು ಅವರ ಮನೋಸ್ಥರ್ಯ ಹೆಚ್ಚಿಸುತ್ತದೆ. ಅದು ಸೋಂಕು ಗುಣಮುಖರಾಗಲು ಸಹಾಯವಾಗುತ್ತದೆ ಎನ್ನುತಾರೆ.