ಮೈಸೂರು:ಭಾರಿ ಗಾಳಿ ಮಳೆಗೆ 7 ಎಕರೆಯಲ್ಲಿ ಬೆಳೆದ ಬಾಳೆ ಬೆಳೆ ಸಂಪೂರ್ಣವಾಗಿ ನಾಶವಾಗಿರುವ ಘಟನೆ ಎಚ್.ಡಿ.ಕೋಟೆ ತಾಲೂಕಿನ ಹೈರಿಗೆ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಮರೀಗೌಡ ಮತ್ತು ಮಾದೇಗೌಡ ಎಂಬುವವರಿಗೆ ಸೇರಿದ ಬಾಳೆ ಬೆಳೆ ಮಳೆ-ಗಾಳಿಗೆ ನಾಶವಾಗಿದೆ ಎಂದು ತಿಳಿದುಬಂದಿದೆ.
ಭಾರಿ ಮಳೆಗೆ 7ಎಕರೆಯಲ್ಲಿ ಬೆಳೆದ ಬಾಳೆ ಬೆಳೆ ನಾಶ, ರೈತರು ಕಂಗಾಲು - Damaged banana crop on 7 acres of heavy rainfall
ಭಾರಿ ಮಳೆಗೆ ಸುಮಾರು 7 ಎಕರೆ ಬಾಳೆ ಬೆಳೆ ನಾಶವಾದ ಘಟನೆ ಮೈಸೂರಿನ ಹೆಚ್.ಡಿ ಕೋಟೆ ತಾಲೂಕಿನ ಹೈರಿಗೆ ಗ್ರಾಮದಲ್ಲಿ ನಡೆದಿದೆ. ರೈತರಾದ ಮರೀಗೌಡ ಮತ್ತು ಮಾದೇ ಗೌಡ ಅವರು ತಮ್ಮ ತೋಟದಲ್ಲಿ ಬೆಳೆದ ಬಾಳೆ ಬೆಳೆ ಮಳೆಗೆ ಆಹುತಿಯಾಗಿದೆ. ಈ ಕುರಿತು ನಷ್ಟ ಪರಿಹಾರ ನೀಡುವಂತೆ ತೋಟಗಾರಿಕೆ ಇಲಾಖೆಗೆ ಒತ್ತಾಯಿಸಿದ್ದಾರೆ.
ಭಾರೀ ಮಳೆಗೆ 7ಎಕರೆಯಲ್ಲಿ ಬೆಳೆದ ಬಾಳೆ ಬೆಳೆ ನಾಶ, ರೈತರು ಕಂಗಾಲು
ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಯಿಂದ, ಇಡೀ ವರ್ಷ ಶ್ರಮವಹಿಸಿ ಬೆಳೆದು ಗೊನೆ ಬಿಟ್ಟಿದ್ದ ಬಾಳೆ ಬೆಳೆ, ಸಂಪೂರ್ಣವಾಗಿ ನೆಲಕಚ್ಚಿದೆ. ಹೈರಿಗೆ ಗ್ರಾಮದ ಹೊರವಲಯದಲ್ಲಿ ಸುಮಾರು 7 ಎಕರೆಯಲ್ಲಿ ಬೆಳೆದಿದ್ದ ಬಾಳೆ ನಾಶವಾಗಿದ್ದು, ರೈತರಾದ ಮರೀಗೌಡ ಮತ್ತು ಮಾದೇಗೌಡ ಕಂಗಲಾಗಿದ್ದಾರೆ. ನಷ್ಟ ಪರಿಹಾರ ನೀಡುವಂತೆ ರೈತರು ತೋಟಗಾರಿಕೆ ಇಲಾಖೆಗೆ ಒತ್ತಾಯಿಸಿದ್ದಾರೆ.
ಓದಿ :ಮೈಸೂರು: ಮಳೆ-ಗಾಳಿಗೆ ಕೊಂಬೆ ಮುರಿದು ಬಿದ್ದು ಹೋರಿ ಸಾವು, ಅಪಾಯದಿಂದ ರೈತ ಪಾರು