ಮೈಸೂರು:ಕಾಡು ಹಂದಿ ಬೇಟೆಗಾಗಿ ಆಹಾರದಲ್ಲಿ ತುಂಬಿಟ್ಟಿದ್ದ ಸಿಡಿಮದ್ದು ಸ್ಫೋಟವಾಗಿ ಹಸು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೆಟ್ಟದ ಬೀಡು ಗ್ರಾಮದಲ್ಲಿ ನಡೆದಿದೆ.
ಸಿಡಿ ಮದ್ದಿದ್ದ ಆಹಾರ ಪೊಟ್ಟಣ ಸ್ಫೋಟಿಸಿ ಹಸು ಬಾಯಿಗೆ ಗಾಯ: ಚಿಕಿತ್ಸೆ ಫಲಕಾರಿಯಾಗದೇ ಸಾವು..! - ಹೆಚ್.ಡಿ.ಕೋಟೆ ನ್ಯೂಸ್
ಸಿಡಿಮದ್ದು ಸ್ಫೋಟವಾಗಿ ಹಸು ಸಾವನ್ನಪ್ಪಿರುವ ಘಟನೆ ಮೈಸೂರು ಹೆಚ್.ಡಿ.ಕೋಟೆ ತಾಲೂಕಿನ ಬೆಟ್ಟದ ಬೀಡು ಗ್ರಾಮದಲ್ಲಿ ನಡೆದಿದೆ.
ಹಸು ಬಾಯಿ ಸ್ಫೋಟ
ಗ್ರಾಮದ ನರಸಿಂಹಗೌಡ ಎಂಬುವವರಿಗೆ ಸೇರಿದ ಹಸುವನ್ನು ಹೊಲದಲ್ಲಿ ಮೇಯಲು ಬಿಟ್ಟಿದ್ದಾಗ ಯಾರೋ ಕಾಡು ಹಂದಿ ಬೇಟೆಗಾಗಿ ಆಹಾರದಲ್ಲಿ ಸಿಡಿ ಮದ್ದು ತುಂಬಿಸಿ ಇಟ್ಟಿದ್ದರು. ಅದನ್ನು ಹಸು ತಿನ್ನುತ್ತಿದ್ದ ಹಾಗೆ ಸಿಡಿಮದ್ದು ಸ್ಫೋಟಗೊಂಡು ಹಸುವಿನ ಬಾಯಿ ಸಂಪೂರ್ಣ ಛಿದ್ರವಾಗಿತ್ತು.
ವೈದ್ಯರು ನೀಡಿದ ಚಿಕಿತ್ಸೆ ಫಲಕಾರಿಯಾಗದೇ ಹಸು ಸಾವನ್ನಪ್ಪಿದೆ. ಈ ಸಂಬಂಧ ಕಿಡಿಗೇಡಿಗಳನ್ನು ಬಂಧಿಸಿಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕೇರಳದಲ್ಲಿ ಇದೇ ರೀತಿಯಲ್ಲಿ ಆನೆ ಸತ್ತ ಘಟನೆ ಮಾಸುವ ಮುನ್ನವೇ ಈ ಘಟನೆ ನಡೆದಿದೆ.