ಮೈಸೂರು: ವೀಕೆಂಡ್ ಕರ್ಪ್ಯೂ ನಡುವೆಯೂ ಕೋವಿಡ್ ಪರೀಕ್ಷೆ ಹಾಗೂ ಲಸಿಕೆ ನೀಡಲು ಜಿಲ್ಲಾಧಿಕಾರಿ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆಗೆ ಜನರು ಪರೀಕ್ಷೆ ಕೇಂದ್ರಗಳಿಗೆ ಆಗಮಿಸುತ್ತಿದ್ದಾರೆ.
ಇಂದು ಕೊರೊನಾ ಲಸಿಕೆ ಹಾಗೂ ಟೆಸ್ಟ್ ಮಾಡುವುದಾಗಿ ತಮ್ಮ ಮೊಬೈಲ್ಗೆ ಮೆಸೇಜ್ ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸರದಿ ಸಾಲಿನಲ್ಲಿ ನಿಂತು ಕೋವಿಡ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ.