ಮೈಸೂರು: ಕೋವಿಡ್ -19 ಪಾಸಿಟಿವ್ ಕೇಸ್ಗಳು ಮೈಸೂರಿನಲ್ಲೂ ಹೆಚ್ಚಾಗುತ್ತಿದ್ದು, ಇಂದು ಮತ್ತೆ ಮೂವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಮತ್ತೆ 3 ಕೋವಿಡ್ -19 ಕೇಸ್ ಪತ್ತೆ: ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ 63 ಕ್ಕೆ ಏರಿಕೆ - Mysore infections rise to 63
ಮೈಸೂರಿನಲ್ಲಿ ಇಂದು ಮತ್ತೆ 3 ಕೋವಿಡ್-19 ಕೇಸ್ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 63 ಕ್ಕೆ ಏರಿಕೆಯಾಗಿದೆ.
![ಮತ್ತೆ 3 ಕೋವಿಡ್ -19 ಕೇಸ್ ಪತ್ತೆ: ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ 63 ಕ್ಕೆ ಏರಿಕೆ ಕೋವಿಡ್ -19](https://etvbharatimages.akamaized.net/etvbharat/prod-images/768-512-6840675-thumbnail-3x2-lek.jpg)
ಕೋವಿಡ್ -19
52 ನೇ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ 30 ವರ್ಷದ ಹಾಗೂ 50 ವರ್ಷ ವ್ಯಕ್ತಿಗೆ ಸೋಂಕು ತಗುಲಿದೆ. ಜೊತೆಗೆ 65 ರ ವೃದ್ಧನಿಗೆ ಸಹ ಕೊರೊನಾ ದೃಢವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 63 ಕ್ಕೆ ಏರಿಕೆಯಾಗಿದೆ. ಒಟ್ಟು 76 ಪ್ರಕರಣದಲ್ಲಿ 63 ಸಕ್ರಿಯ ಪ್ರಕರಣಗಳು ಕಂಡುಬಂದಿದೆ.