ಮೈಸೂರು: ದಸರಾ ಉದ್ಘಾಟನೆಗೆ ಇನ್ನು 15 ದಿನಗಳು ಮಾತ್ರ ಬಾಕಿ ಇದ್ದು, ಅರಮನೆ ಆವರಣದಲ್ಲಿ ತಯಾರಿ ಭರದಿಂದ ಸಾಗುತ್ತಿದೆ.
ಮಧುವಣಗಿತ್ತಿಯಂತೆ ಸಿಂಗಾರಗೊಳ್ತಿದೆ ಮೈಸೂರು: ಕಂಗೊಳಿಸ್ತಿದೆ ಅರಮನೆ - ಅರಮನೆಗೆ ಸುಣ್ಣಬಣ್ಣ ಬಳಿಯುವ ಕಾರ್ಯ
ದಸರಾ ಉದ್ಘಾಟನೆಗೆ ಇನ್ನು 15 ದಿನಗಳು ಮಾತ್ರ ಬಾಕಿ ಇದ್ದು, ಅರಮನೆ ಒಳಾವರಣದ ಗೋಡೆ, ಅರಮನೆ ಮುಂಭಾಗ ಹಾಗೂ ಎಲ್ಲ ದ್ವಾರಗಳಿಗೂ ಸುಣ್ಣಬಣ್ಣ ಬಳಿಯಲಾಗುತ್ತಿದೆ.
ಅರಮನೆ
ಈಗಾಗಲೇ ಅರಮನೆ ಆವರಣ, ಒಂಟೆ, ಹಸುಗಳನ್ನು ಕಟ್ಟುವ ಸ್ಥಳಗಳಲ್ಲಿ ಬಣ್ಣ ಬಳಿಯುವ ಕೆಲಸ ಪೂರ್ಣಗೊಂಡಿದೆ. ಇದೀಗ ಅರಮನೆ ಒಳಾವರಣದ ಗೋಡೆ, ಅರಮನೆ ಮುಂಭಾಗ ಹಾಗೂ ಎಲ್ಲ ದ್ವಾರಗಳಿಗೂ ಸುಣ್ಣಬಣ್ಣ ಬಳಿಯಲಾಗುತ್ತಿದೆ.
ಅಲ್ಲದೇ ಮೈಸೂರು ನಗರದಾದ್ಯಂತ ಇರುವ ಪ್ರಮುಖ ಕಮಾನುಗಳು, ವೃತ್ತಗಳು, ರಸ್ತೆಗಳ ಇಕ್ಕೆಲಗಳನ್ನು ಸ್ವಚ್ಛಗೊಳಿಸಿ ಅಂದಗೊಳಿಸಲಾಗುತ್ತಿದೆ. ದಸರಾ ವೇಳೆ ಸಾಕಷ್ಟು ಪ್ರವಾಸಿಗರು ನಗರಕ್ಕೆ ಆಗಮಿಸುತ್ತಿರುವುದರಿಂದ ರಸ್ತೆಗಳಲ್ಲಿ ಒಣಗಿರುವ ಹಾಗೂ ಅಪಾಯ ಉಂಟುಮಾಡುವ ಮರಗಳನ್ನು ನಗರ ಪಾಲಿಕೆ ಸಿಬ್ಬಂದಿಗಳು ತೆರವುಗೊಳಿಸುತ್ತಿದ್ದಾರೆ.