ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕುಲಪತಿಯಾಗಿದ್ದ ಸಂದರ್ಭದಲ್ಲಿ ನಡೆಸಿದ್ದಾರೆ ಎನ್ನಲಾದ ಅಕ್ರಮಗಳ ಬಗ್ಗೆ ಪ್ರಕರಣ ದಾಖಲಾಗಿದ್ದ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಕೋರಿ ಪ್ರೊ.ರಂಗಪ್ಪ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮೈಸೂರಿನ ನ್ಯಾಯಾಲಯ ತಿರಸ್ಕರಿಸಿದೆ.
ನಕಲಿ ಅಂಕಪಟ್ಟಿ, ಭ್ರಷ್ಟಾಚಾರ ಪ್ರಕರಣ: ಪ್ರೊ.ರಂಗಪ್ಪ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ - ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕುಲಪತಿ
ಪ್ರೊ.ರಂಗಪ್ಪ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮೈಸೂರು ನ್ಯಾಯಾಲಯ ತಿರಸ್ಕರಿಸಿದೆ.
![ನಕಲಿ ಅಂಕಪಟ್ಟಿ, ಭ್ರಷ್ಟಾಚಾರ ಪ್ರಕರಣ: ಪ್ರೊ.ರಂಗಪ್ಪ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ Counterfeit Scam, Corruption Case](https://etvbharatimages.akamaized.net/etvbharat/prod-images/768-512-5577448-thumbnail-3x2-court.jpg)
ಕರಾಮುವಿ ನಕಲಿ ಅಂಕಪಟ್ಟಿ, ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದರು ಎಂದು ರಂಗಪ್ಪ ವಿರುದ್ಧ, ಅಲ್ಲದೆ ವಿಶ್ರಾಂತ ಕುಲಪತಿಗಳಾದ ಪ್ರೊ.ಎಂ.ಜಿ ಕೃಷ್ಣನ್, ಮಾಜಿ ಕುಲಸಚಿವರಾದ ಪ್ರೊ.ಬಿ.ಎಸ್ ವಿಶ್ವನಾಥ್, ಪ್ರೊ.ನಾಯಕ್ ಹಾಗೂ ಮಾಹಿತಿ ತಂತ್ರಜ್ಞಾನ ವಿಭಾಗದ ನಿವೃತ್ತ ನಿರ್ದೇಶಕ ಕಮಲೇಶ್ ವಿರುದ್ಧ ನ್ಯಾಯಮೂರ್ತಿ ಭಕ್ತವತ್ಸಲ ಸಮಿತಿ ಆಧಾರದ ಮೇಲೆ ಇಲ್ಲಿನ ಜಯ ಲಕ್ಷ್ಮಿಪುರಂ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ ಮೈಸೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮಧ್ಯಂತರ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣ ವಿಚಾರಣೆ ಹಂತದಲ್ಲಿರುವುದರಿಂದ ರಂಗಪ್ಪ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.