ಮೈಸೂರು/ಚಾಮರಾಜನಗರ:ಚಾಮರಾಜನಗರ ಜಿಲ್ಲೆಯಲ್ಲಿಂದು 65 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 5,390ಕ್ಕೆ ಏರಿಕೆಯಾಗಿದೆ. ಮೈಸೂರಿನಲ್ಲಿ 501 ಮಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಈ ಮೂಲಕ ಪಾಸಿಟಿವ್ ಪ್ರಕರಣಗಳ ಸಂಖ್ಯೆ 44,638ಕ್ಕೇರಿದೆ.
ಚಾಮರಾಜನಗರದಲ್ಲಿಂದು 65 ಜನರಿಗೆ ಕೊರೊನಾ: ಮೈಸೂರಿನಲ್ಲಿ 44 ಸಾವಿರಕ್ಕೇರಿದ ಪ್ರಕರಣಗಳು
ಚಾಮರಾಜನಗರ ಜಿಲ್ಲೆಯಲ್ಲಿಂದು 65 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 5,390ಕ್ಕೆ ಏರಿಕೆಯಾಗಿದೆ. ಮೈಸೂರಿನಲ್ಲಿ 501 ಮಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಈ ಮೂಲಕ ಪಾಸಿಟಿವ್ ಪ್ರಕರಣಗಳ ಸಂಖ್ಯೆ 44,638ಕ್ಕೇರಿದೆ.
ಇಂದು ಚಾಮರಾಜನಗರ ಜಿಲ್ಲೆಯಲ್ಲಿ 62 ಮಂದಿ ಗುಣಮುಖರಾಗುವ ಮೂಲಕ 796 ಸಕ್ರಿಯ ಪ್ರಕರಣಗಳ ಇವೆ. 46 ಮಂದಿ ಸೋಂಕಿತರು ಐಸಿಯುನಲ್ಲಿದ್ದು 227 ಮಂದಿ ಹೋಂ ಐಸೋಲೇಷನ್ನಲ್ಲಿದ್ದಾರೆ. 650 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ. ಮಹಾಮಾರಿ ಸೋಂಕಿನಿಂದ ಇಂದು ಇಬ್ಬರು ಅಸುನೀಗಿದ್ದಾರೆ.
ಮೈಸೂರಿನಲ್ಲಿಂದು 501 ಮಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಈ ಮೂಲಕ ಪಾಸಿಟಿವ್ ಪ್ರಕರಣಗಳ ಸಂಖ್ಯೆ 44,638ಕ್ಕೇರಿದೆ. ಇಂದು 365 ಮಂದಿ ಗುಣಮುಖರಾಗಿದ್ದಾರೆ ಈ ಮೂಲಕ ಗುಣಮುಖರಾದವರ ಸಂಖ್ಯೆ 36,470ಕ್ಕೇರಿದೆ. ಜಿಲ್ಲೆಯಲ್ಲಿ ಇನ್ನೂ 7,246 ಸಕ್ರಿಯ ಪ್ರಕರಣಗಳಿವೆ. ಇಂದು 10 ಮಂದಿ ಕೊರೊನಾದಿಂದ ಮೃತಪಟ್ಟಿದ್ದು, ಈವರೆಗೆ ಕೊರೊನಾ ಸೋಂಕಿಗೆ 922 ಮಂದಿ ಸಾವನ್ನಪ್ಪಿದ್ದಾರೆ.