ಕರ್ನಾಟಕ

karnataka

ETV Bharat / city

ಕೊರೊನಾ ಸಾವಿನ ಪ್ರಮಾಣದ ಸರಾಸರಿ: ಮೈಸೂರಲ್ಲೇ ಹೆಚ್ಚು... ಕಾರಣ!? - ಮೈಸೂರಲ್ಲಿ ಕೊರೊನಾ ಸಾವಿನ ಪ್ರಮಾಣ

ಮೈಸೂರಲ್ಲಿ ಕೊರೊನಾ ಸಾವಿನ ಪ್ರಮಾಣ ದಿನದಿಂದ ಹೆಚ್ಚುತ್ತಿದೆ. ಕಳೆದ 17 ದಿನದಲ್ಲಿ 128 ಮಂದಿ ಸಾವಿಗೀಡಾಗಿದ್ದಾರೆ. ಕೊರೊನಾ ನಿರ್ಮೂಲನೆಗೆ ಜಿಲ್ಲಾಡಳಿತ ಹಲಿರುಳು ಶ್ರಮಿಸುತ್ತಿದೆ.

mysore circle
ಮೈಸೂರು ಸರ್ಕಲ್

By

Published : Aug 4, 2020, 5:19 PM IST

ಮೈಸೂರು: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ಕಳೆದ 17 ದಿನಗಳಲ್ಲಿ 128 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಪ್ರಮಾಣ ಶೇ.3.3 ರಷ್ಟು ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ನಿತ್ಯ 200 ರ ಗಡಿ ತಲುಪುತ್ತಿದೆ. ಜೊತೆಗೆ ನಿತ್ಯ 10 ಜನ ಬಲಿಯಾಗುತ್ತಿದ್ದಾರೆ. ಇದರಿಂದ ಮೈಸೂರಿನಲ್ಲಿ ಸಾವಿನ ಪ್ರಮಾಣದ ಸರಾಸರಿ ಹೆಚ್ಚಾಗುತ್ತಿದೆ. ಮೃತರಲ್ಲಿ ಹೆಚ್ಚಿನವರು ವೃದ್ಧರು ಹಾಗೂ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದವರಾಗಿದ್ದಾರೆ.

ಮೈಸೂರು ಡಿಸಿ

17 ದಿನಗಳಲ್ಲೇ 128 ಮಂದಿ ಕೊರೊನಾದಿಂದ ಸಾವು:

ಜಿಲ್ಲೆಯಲ್ಲಿ ಜೂನ್ 27 ರಂದು ಕೊರೊನಾದಿಂದ ಮೊದಲ ಸಾವಾಗಿದ್ದು, ನಿನ್ನೆಯವರೆಗೆ 174 ಮಂದಿ ಮೃತಪಟ್ಟಿದ್ದಾರೆ. ಇನ್ನು ಸಾವಿನ ಪ್ರಮಾಣ ಶೇ 3.3 ರಷ್ಟು ಏರಿಕೆಯಾಗಿದ್ದು , ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ 2 ರಷ್ಟು ಇದೆ. ಇಲ್ಲಿಯವರೆಗೆ 5,192 ಪ್ರಕರಣ ಪತ್ತೆಯಾಗಿದ್ದ , 2,952 ಸಕ್ರಿಯ ಪ್ರಕರಣಗಳಾಗಿವೆ. ರಾಜ್ಯದಲ್ಲಿ ಸಾವಿನ ಪ್ರಮಾಣದ ಸರಾಸರಿಯಲ್ಲಿ ಮೈಸೂರು ಮತ್ತು ಬೀದರ್ ಮೊದಲ ಸ್ಥಾನದಲ್ಲಿವೆ.

ಸಾವಿಗೆ ಕಾರಣ ?:

ಜನರು ಕೊರೊನಾ ಸೋಂಕಿನಿಂದ ಮಾತ್ರ ಸಾವನ್ನಪ್ಪುತ್ತಿಲ್ಲ, ಬದಲಾಗಿ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರು ಹಾಗೂ ಸೋಂಕಿನ ಲಕ್ಷಣಗಳು ಕಂಡು ಬಂದರೂ ರೋಗಿಗಳು ಚಿಕಿತ್ಸೆ ಪಡೆಯಲು ಹಿಂದೇಟು ಹಾಕಿ ಅಂತಿಮ ಕ್ಷಣಗಳಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದರಿಂದ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಜಿಲ್ಲಾಡಳಿತ ಹಗಲಿರುಳು ಶ್ರಮಿಸಿ, ಹೆಚ್ಚಿನ ಆಂಬ್ಯುಲೆಲ್ಸ್​​ಗಳನ್ನು ನಿಯೋಜನೆ ಮಾಡಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ 3 ಆಂಬ್ಯುಲೆನ್ಸ್ ನಿಯೋಜಿಸಲಾಗಿದ್ದು, ಇದರಿಂದ ಸಾವಿನ ಪ್ರಮಾಣ ಕಡಿಮೆ ಮಾಡಬಹುದಾಗಿದೆ. ಕಂಟೈನ್ಮೆಂಟ್ ಝೋನ್​ಗಳು ಹೆಚ್ಚಾಗುತ್ತಿದ್ದು, ಈವರೆಗೆ 1,450 ಕ್ಕೂ ಹೆಚ್ಚು ಪ್ರದೇಶಗಳನ್ನು ಕಂಟೈನ್ಮೆಂಟ್ ಪ್ರದೇಶಗಳೆಂದು ಜಿಲ್ಲಾಧಿಕಾರಿ ಘೋಷಿಸಿದ್ದಾರೆ.

ಮೈಸೂರಿಗೆ ಹೊರ ದೇಶ ಹಾಗೂ ರಾಜ್ಯಗಳಿಂದ ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್.

ABOUT THE AUTHOR

...view details