ಕರ್ನಾಟಕ

karnataka

ETV Bharat / city

ಆಶಾ ಕಾರ್ಯಕರ್ತೆಗೆ ಸೋಂಕು: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಕಿಡಿಗೇಡಿಗಳು

ಕೊರೊನಾ ಸೋಂಕು ತಗುಲಿರುವ ಮೈಸೂರು ಜಿಲ್ಲೆಯ ಎಚ್‌.ಡಿ. ಕೋಟೆ ತಾಲೂಕಿನ ತೊರವಳ್ಳಿ ಗ್ರಾಮದ ಆಶಾ ಕಾರ್ಯಕರ್ತೆಯ ವಿಡಿಯೋ ಮಾಡಿರುವ ಕಿಡಿಗೇಡಿಗಳು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ನೊಂದ ಆಶಾ ಕಾರ್ಯಕರ್ತೆ ಕಿಡಿಗೇಡಿಗಳ ವಿರುದ್ಧ ಕ್ರಮ‌ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

corona-infected-toravalli-asha-worker-video-viral
ಸೋಂಕಿತ ಆಶಾ ಕಾರ್ಯಕರ್ತೆ

By

Published : Jul 9, 2020, 8:51 PM IST

ಮೈಸೂರು: ಕೊರೊನಾ ಸೋಂಕಿತ ಆಶಾ ಕಾರ್ಯಕರ್ತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಟ್ರೋಲ್ ಮಾಡುವ ಮೂಲಕ ಅಪಮಾನ ಮಾಡಿದ್ದಾರೆ.

ಸೋಂಕಿತ ಆಶಾ ಕಾರ್ಯಕರ್ತೆಯ ವಿಡಿಯೋ

ಎಚ್‌.ಡಿ. ಕೋಟೆ ತಾಲೂಕಿನ ತೊರವಳ್ಳಿ ಗ್ರಾಮದ ಆಶಾ ಕಾರ್ಯಕರ್ತೆಗೆ ಇಂದು ಕೊರೊನಾ ಸೋಂಕು ದೃಢಪಟ್ಟಿದ್ದು, ಇವರನ್ನು ಮೈಸೂರಿನ ಮೇಟಗಳ್ಳಿಯಲ್ಲಿರುವ ಕೋವಿಡ್-19 ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ವಿಡಿಯೋ ಮಾಡಿರುವ ಕಿಡಿಗೇಡಿಗಳು ಸಾಮಾಜಿಕ‌ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದಾರೆ.

ಈಗಾಗಲೇ ಕೊರೊನಾ ಪಾಸಿಟಿವ್​​ಗೆ ಕುಗ್ಗಿರುವ ಮಹಿಳೆಗೆ, ಟ್ರೋಲ್ ಮಾಡುವ ಮೂಲಕ ಮತ್ತಷ್ಟು ಕುಗ್ಗುವಂತೆ ಮಾಡಿದ್ದಾರೆ. ನೊಂದ ಆಶಾ ಕಾರ್ಯಕರ್ತೆ ಕಿಡಿಗೇಡಿಗಳ ವಿರುದ್ಧ ಕ್ರಮ‌ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ದೂರವಾಣಿ ಮೂಲಕ ಒತ್ತಾಯಿಸಿದ್ದಾರೆ.

ABOUT THE AUTHOR

...view details