ಕರ್ನಾಟಕ

karnataka

ETV Bharat / city

ಮೈಸೂರು ಜಿಲ್ಲೆಯಲ್ಲಿಂದು ಕೊರೊನಾಗೆ ಮೊದಲ ಬಲಿ..! - mysore corona case

ಮೈಸೂರು ಜಿಲ್ಲೆಯಲ್ಲಿಂದು ಕೊರೊನಾಗೆ ಮೊದಲ ಬಲಿಯಾಗಿದ್ದು, ಬೆಂಗಳೂರು ಮೂಲದ 87 ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ. ಇದಲ್ಲದೇ, ಇಂದು 22 ಮಂದಿಗೆ ಸೋಂಕು ಧೃಡಪಟ್ಟಿದೆ.

corona infected 87-year-old man died in mysore
ಮೈಸೂರು ಜಿಲ್ಲೆಯಲ್ಲಿಂದು ಕೊರೊನಾಗೆ ಮೊದಲ ಬಲಿ..!

By

Published : Jun 25, 2020, 8:27 PM IST

ಮೈಸೂರು:ಜಿಲ್ಲೆಯಲ್ಲಿಂದು ಕೊರೊನಾಗೆ ಮೊದಲ ಬಲಿಯಾಗಿದೆ. ಬೆಂಗಳೂರು ಮೂಲದ 87 ವರ್ಷದ ವೃದ್ಧ ಕೊರೊನಾ ಸೋಂಕಿನಿಂದ ಸಾವನ್ನಪ್ಪಿರುವುದಾಗಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.

ಬೆಂಗಳೂರಿನಿಂದ ಕೆ.ಆರ್.ನಗರ ತಾಲ್ಲೂಕಿನ‌ ಸಂಬಂಧಿಕರ ಮನೆಗೆ ಆಗಮಿಸಿದ್ದ ವೃದ್ಧ, ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದರು‌‌. ಇವರನ್ನ ಜೂನ್ 15ರಂದು ಕೆ.ಆರ್.ನಗರ ತಾಲ್ಲೂಕಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿಂದ ಜೂನ್ 23ರಂದು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಅವರು ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಸೊಂಕು ದೃಢಪಟ್ಟಿದೆ. ಆರೋಗ್ಯ ಇಲಾಖೆ ಮಾರ್ಗದರ್ಶನದಂತೆ ಮೃತರ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 2ನೇ ಹಂತದಲ್ಲಿ ಕೊರೊನಾ ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ಇಂದು 22 ಮಂದಿಗೆ ಸೋಂಕು ಧೃಡಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 208ಕ್ಕೆ ಏರಿಕೆಯಾಗಿದ್ದು, ಈ ಪೈಕಿ 125 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ABOUT THE AUTHOR

...view details