ಮೈಸೂರು :ಲಾಕ್ಡೌನ್ ಕಾರಣ ನಗರ ಪ್ರದೇಶಗಳಿಂದ ಹಳ್ಳಿಗೆ ಬಂದ ಜನರಿಂದ ಹಳ್ಳಿಯಲ್ಲಿ ಕೋವಿಡ್ ಹೆಚ್ಚಾಗಲು ಕಾರಣವಾಗಿದೆ. ಹಳ್ಳಿಯ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳು ಮನವಿ ಮಾಡಿದ್ದಾರೆ.
ಇಂದು ಜೆಎಸ್‌ಎಸ್ ಆಸ್ಪತ್ರೆಗೆ ಭೇಟಿ ನೀಡಿ ಎರಡನೇ ಕೋವಿಡ್ ಲಸಿಕೆ ಪಡೆದ ನಂತರ ಆಸ್ಪತ್ರೆಯಲ್ಲಿ ಕೋವಿಡ್ ನಿರ್ವಹಣೆ ಹೇಗೆ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆದು ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಗಳು, ಕೋವಿಡ್ ಬಗ್ಗೆ ಯಾವುದೇ ರೀತಿಯ ಆತಂಕ ಸೃಷ್ಟಿಯಾಗಬಾರದು ಎಂಬ ಮುನ್ನೆಚ್ಚರಿಕೆಯಿಂದ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ.
ಆಸ್ಪತ್ರೆಯಲ್ಲಿ ಕೋವಿಡ್ಗೆ ಏನೆಲ್ಲಾ ಚಿಕಿತ್ಸೆಗಳಿವೆ ಅವುಗಳನ್ನು ಕೊಡಬಹುದು. ಯಾರಿಂದಲೂ ಶೇ100ರಷ್ಟು ಚಿಕಿತ್ಸೆ ಕೊಡಲು ದೇಶದಲ್ಲಿ ಹಾಗೂ ಪ್ರಪಂಚದಲ್ಲಿ ಸಾಧ್ಯವಿಲ್ಲ. ಆದ್ದರಿಂದ ಜನ ಸಾಮಾನ್ಯರು, ಎಲ್ಲರೂ ಕೋವಿಡ್ನ ಸಲಹೆ, ಸೂಚನೆಗಳನ್ನು ಪಾಲಿಸಬೇಕು ಎಂದರು.