ಕರ್ನಾಟಕ

karnataka

ETV Bharat / city

ತಿ.ನರಸೀಪುರ ತಾಲೂಕಿಗೂ ವಕ್ಕರಿಸಿದ ಕೊರೊನಾ... ಓರ್ವನಿಗೆ ಸೋಂಕು ದೃಢ - Corona Corrupts A Man With Infection t narasipura

ಸೋಸಲೆಯ ಎಸ್ ಕೆಪಿ ಅಗ್ರಹಾರ ಗ್ರಾಮವನ್ನು ಸೀಲ್ ಡೌನ್ ಮಾಡಿ ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವ ಸುಮಾರು 12 ಮಂದಿಯನ್ನು ಕ್ವಾರಂಟೈನ್ ಮಾಡುವ ಸಾಧ್ಯತೆ ಇದೆ ಎಂದು ತಾಲೂಕು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Corona Corrupts A Man With Infection t narasipura
ತಿ.ನರಸೀಪುರ ತಾಲ್ಲೂಕಿಗೂ ಒಕ್ಕರಿಸಿದ ಕೊರೊನಾ, ಓರ್ವನಿಗೆ ಸೋಂಕು ಧೃಢ

By

Published : Jun 21, 2020, 1:29 AM IST

ಮೈಸೂರು: ಬೆಂಗಳೂರಿನಿಂದ ತಿ.ನರಸೀಪುರ ತಾಲೂಕಿನ ಸೋಸಲೆ ಗ್ರಾಮದ ಎಸ್ ಕೆಪಿ ಅಗ್ರಹಾರಕ್ಕೆ ಬಂದಿದ್ದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ತಾಲೂಕಿನಾದ್ಯಂತ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಭಾನುವಾರ ಬೆಂಗಳೂರಿನಿಂದ ತಾಲೂಕಿನ ಸೋಸಲೆ ಗ್ರಾಮದ ತನ್ನ ಮನೆಗೆ ಬಂದಿದ್ದ 32 ವರ್ಷದ ವ್ಯಕ್ತಿಗೆ ಜ್ವರ, ನೆಗಡಿ ಕಾಣಿಸಿಕೊಂಡ ಪರಿಣಾಮ
ಬುಧುವಾರ ಶಂಕಿತ ವ್ಯಕ್ತಿ ಅನುಮಾನದೊಂದಿಗೆ ಪಟ್ಟಣದ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿದ ಬಳಿಕ ರಕ್ತದ ಮಾದರಿಯನ್ನು ಮೈಸೂರಿನ ಕೋವಿಡ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ಕೋವಿಡ್ ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆ ನಂತರ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆ ವ್ಯಕ್ತಿಯನ್ನು ಶನಿವಾರ ರಾತ್ರಿ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ.

ಸೋಸಲೆಯ ಎಸ್ ಕೆಪಿ ಅಗ್ರಹಾರ ಗ್ರಾಮವನ್ನು ಸೀಲ್ ಡೌನ್ ಮಾಡಿ ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವ ಸುಮಾರು 12 ಮಂದಿಯನ್ನು ಕ್ವಾರಂಟೈನ್ ಮಾಡುವ ಸಾಧ್ಯತೆ ಇದೆ ಎಂದು ತಾಲೂಕು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details