ಮೈಸೂರು: ಪೊಲೀಸರ ಸರ್ಪಗಾವಲಿನ ಮಧ್ಯೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಇಬ್ಬರನ್ನು ಅವಿಶ್ವಾಸ ನಿರ್ಣಯದ ಮೂಲಕ ಸ್ಥಾನದಿಂದ ಪದಚ್ಯುತಿಗೊಳಿಸಿರುವ ಘಟನೆ ನಂಜನಗೂಡು ತಾಲ್ಲೂಕಿನ ಹೆಮ್ಮರಗಾಲ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
ಪೊಲೀಸ್ ಸರ್ಪಗಾವಲಿನ ಮಧ್ಯೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಪದಚ್ಯುತಿ ಅಧ್ಯಕ್ಷರಾದ ಗೌರಮ್ಮ, ಉಪಾಧ್ಯಕ್ಷರಾದ ಪುಟ್ಟಸಿದ್ದಮ್ಮ ವಿರುದ್ಧ ವಿಕ್ಷಕರಾಗಿ ಆಗಮಿಸಿದ್ದ ಶಿವೇಗೌಡರ ಸಮುಖದಲ್ಲಿ ಅವಿಶ್ವಾಸ ನಿರ್ಣಯ ಕೈಗೊಳ್ಳಲಾಯಿತು.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಶಿವೇಗೌಡರ, ಸಭೆಯಲ್ಲಿ ಭಾಗವಹಿಸಿದ್ದ 14 ಜನ ಸದಸ್ಯರಲ್ಲಿ 13 ಜನರು ಅಧ್ಯಕ್ಷ ಹಾಗೂಉಪಾಧ್ಯಕ್ಷರ ವಿರುದ್ಧ ಮತ ಚಲಾಯಿಸಿದರು. ಒಬ್ಬರು ತಟಸ್ಥರಾಗಿ ಉಳಿದ ಕಾರಣ, ಈ ಕ್ರಮಕೈಗೊಳ್ಳಲಾಗಿದ್ದು, ಮುಂದಿನ ಚುನಾವಣೆಗೆ ದಿನಾಂಕ ನಿಗದಿ ಮಾಡಲಾಗುವುದು ಎಂದು ತಿಳಿಸಿದರು.
ಸದಸ್ಯ ಪುರುಷೋತ್ತಮ್ ಮಾತನಾಡಿ, ಸಮಯಕ್ಕೆ ಸರಿಯಾಗಿ ಸಭೆ ಮಾಡದಿರುವುದು, ಗ್ರಾಮದ ಅಭಿವೃದ್ಧಿಗೆ ಒತ್ತು ನೀಡದಿರುವುದು, ಹಾಗೂ ಪತ್ನಿಯರ ಕೆಲಸಕ್ಕೆ ಗಂಡಂದಿರು ಕೆಲಸ ಮಾಡುತ್ತಿದ್ದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.