ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿರುವ ಮೈಸೂರು ಭಾಗದ ಅಭ್ಯರ್ಥಿ ಪರವಾಗಿ ನಡೆಸಬೇಕಾಗಿದ್ದ ಸಮಾವೇಶವನ್ನು ಮುಂದೂಡಲಾಗಿದೆ ಎಂದು ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿ ಪರ ಸಮಾವೇಶ ಮುಂದೂಡಿಕೆ: ಜಿಟಿಡಿ
ಏ. 9ರಂದು ಪ್ರಧಾನಿ ಮೋದಿ ಅವರು ಮೈಸೂರು ಭಾಗದ ಬಿಜೆಪಿ ಅಭ್ಯರ್ಥಿ ಪರವಾಗಿ ಸಮಾವೇಶ ಮಾಡಲು ಆಗಮಿಸುತ್ತಿರುವ ಹಿನ್ನೆಲೆ ಅಂದೇ ನಡೆಯಬೇಕಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಸಮಾವೇಶವನ್ನು ಮುಂದೂಡಲಾಗುವುದು ಎಂದು ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ಜಿ.ಡಿ.ದೇವೇಗೌಡ
ಏ. 9ರಂದು ಪ್ರಧಾನಿ ಮೋದಿ ಅವರು ಮೈಸೂರು ಭಾಗದ ಬಿಜೆಪಿ ಅಭ್ಯರ್ಥಿ ಪರವಾಗಿ ಸಮಾವೇಶ ಮಾಡಲು ಆಗಮಿಸುತ್ತಿರುವ ಹಿನ್ನೆಲೆ ಅಂದೇ ನಡೆಯಬೇಕಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಸಮಾವೇಶವನ್ನು ಮುಂದೂಡಲಾಗುವುದು ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಲ್ಲದೆ ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆ ಪಾರದರ್ಶಕವಾಗಿ ನಡೆಯಲಿ. ಶಾಂತಿಯುತವಾಗಿ ಜನರು ಮತದಾನ ಮಾಡಲಿ ಎಂದಿದ್ದಾರೆ.
ಹಾಗೇ ಇಂದು ಯುಗಾದಿ ಪ್ರಯುಕ್ತ ಪತ್ನಿ ಲಲಿತಾ ಅವರೊಂದಿಗೆ ಜಿಟಿಡಿ ತಮ್ಮ ಮನೆಯಲ್ಲಿ ಪೂಜೆ ಸಲ್ಲಿಸಿದರು.