ಮೈಸೂರು :ರಾಜ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಪಾವಿತ್ರ್ಯತೆ ಹಾಳಾಗಿದೆ. ಪರೀಕ್ಷಾ ವ್ಯವಸ್ಥೆ ಲಂಚಮಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೇಮಕಾತಿಯಲ್ಲಿ ಅಕ್ರಮ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿರುವ ಬಿಜೆಪಿ ಎಂಎಲ್‌ಸಿ ಹೆಚ್.ವಿಶ್ವನಾಥ್.. ಒಂದು ಪರೀಕ್ಷೆಯನ್ನು ಸರಿಯಾಗಿ ಮಾಡಕ್ಕಾಗಲ್ಲ ಅಂದ್ರೆ ಹೇಗೆ? ಗೀತಾ ಎಂಬ ವಕೀಲೆಯನ್ನು ಕೆಪಿಎಸ್‌ಸಿಗೆ ನೇಮಕ ಮಾಡಿದ್ರು. ಅವಳು ವಿಜಯೇಂದ್ರ ಅವರ ಫ್ರೆಂಡ್ ಅಂತೆ. ಹಿರಿಯ ಅಧಿಕಾರಿಗಳು ಕೆಪಿಎಸ್‌ಸಿಗೆ ನೇಮಕವಾಗುತ್ತಿಲ್ಲ. ಕೆಪಿಎಸ್‌ಸಿ ಪಾವಿತ್ರತೆ ಹಾಳು ಮಾಡ್ತಿದ್ದಾರೆ. ಅಭ್ಯರ್ಥಿ ಆಯ್ಕೆ ಮಾಡುವವರೇ ಭ್ರಷ್ಟರಾದ್ರೆ ಏನು ನಿರೀಕ್ಷೆ ಮಾಡಲು ಸಾಧ್ಯ ಎಂದು ಕಿಡಿಕಾರಿದರು.
ಯುಪಿಎಸ್‌ಸಿಯಲ್ಲಿ ಉತ್ತಮ ವ್ಯಕ್ತಿಗಳಿದ್ದಾರೆ. ಅದರಂತೆ ಕೆಪಿಎಸ್‌ಸಿಯಲ್ಲೂ ಯಾಕೆ ಇಲ್ಲ. ಜನ ಹೇಳೋದು ಸರಿ, ನಾವು ಮಾಡೋದು ಸರಿ ಅನ್ನುವ ಹಾಗಿದೆ. ಜನ ಭ್ರಷ್ಟ ಸರ್ಕಾರ ಅಂತಿದ್ದಾರೆ, ನಾವು ಕೂಡ ಹಾಗೆ ಮಾಡುತ್ತಿದ್ದೇವೆ. ಸಿಎಂ ಬೊಮ್ಮಾಯಿ ಇದನ್ನ ಗಂಭೀರವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಭಾವನಾತ್ಮಕ ವಿಚಾರಗಳ ಚರ್ಚೆ ವಿಚಾರವಾಗಿ ಮಾತನಾಡಿ, ಬದುಕು ಕೊಡುವ, ಜನ ಹಿತ ಕಾಪಾಡುವ, ಜೀವ ಕೊಡುವ ಸರ್ಕಾರ ಆಗಬೇಕು. ಜೀವ ತೆಗೆಯೋ ಸರ್ಕಾರ ಆಗಬಾರದು ಎಂದು ಅಸಮಾಧಾನ ಹೊರಹಾಕಿದರು. ಮಲಬಾರ್ ಗೋಲ್ಡ್ನಲ್ಲಿ ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿ ಮಾಡಬೇಡಿ ಅಭಿಯಾನ ವಿಚಾರವಾಗಿ ಮಾತನಾಡಿ, ಯಾರೀ ಆ ಮುತಾಲಿಕ್? ಗ್ರಾಮ ಪಂಚಾಯತ್ ಮೆಂಬರ್ ಆಗಿದ್ದಾರಾ? ಇದು ಮುತಾಲಿಕ್ ಸರ್ಕಾರನಾ? ಆರ್ಎಸ್ಎಸ್ ಸರ್ಕಾರನಾ? ಶ್ರೀರಾಮ ಸೇನೆ ಸರ್ಕಾರನಾ? ಮುತಾಲಿಕ್ ಸರ್ಕಾರ ನಡೆಸುತ್ತಿದ್ದಾರಾ? ಬರೀ ಕೀಟಲೆ ಮಾಡಿಕೊಂಡು ಮಾತಾಡುವವರಿಗೆ ಮಣೆ ಹಾಕಬೇಡಿ ಎಂದು ವಾಗ್ದಾಳಿ ನಡೆಸಿದರು.
ಶಿವಮೊಗ್ಗ ಏರ್‌ಪೋರ್ಟ್‌ಗೆ ತಮ್ಮ ಹೆಸರನ್ನು ತಿರಸ್ಕಾರ ಮಾಡುವಂತೆ ಪತ್ರ ಬರೆದಿರುವ ಮಾಜಿ ಸಿಎಂ ಬಿಎಸ್‌ವೈ ಅವರದು ದೊಡ್ಡತನ, ಪತ್ರ ಬರೆದಿರೋದು ಒಳ್ಳೆಯ ಬೆಳವಣಿಗೆ. ಶಿವಮೊಗ್ಗದಲ್ಲಿ ಎಂತೆಂಥಾ ಮಹಾನ್ ನಾಯಕರು ಹುಟ್ಟಿ ಬೆಳೆದಿದ್ದಾರೆ. ರಾಷ್ಟ್ರಕವಿ ಕುವೆಂಪು ಜನ್ಮತಾಳಿದ ಊರು. ಅಂತವರ ಹೆಸರನ್ನ ಘೋಷಿಸದೆ ಏನೇನೋ ಮಾಡುತ್ತಾರೆ. ಬಿಎಸ್‌ವೈ ಹೆಸರು ಘೋಷಣೆಯಿಂದ ವೋಟ್ ಬರಲ್ಲ. ಗಿಮಿಕ್‌ನಿಂದ ಯಾವ ಮತಗಳು ಬರಲ್ಲ ಎಂದು ಕುಟುಕಿದರು.
ಸಿದ್ದರಾಮಯ್ಯ ಹುಣಸೂರಿನಿಂದ ಸ್ಪರ್ಧೆಗೆ ಹೆಚ್.ವಿಶ್ವನಾಥ್ ಆಹ್ವಾನ :ಹುಣಸೂರಿನಿಂದ ಸಿದ್ದರಾಮಯ್ಯ ಸ್ಪರ್ಧಿಸಿದ್ರೆ ಗೆಲ್ಲಿಸುತ್ತೇವೆ. ಅಂಥಾ ಶೆಟ್ರು ಮಂಜನನ್ನೆ ಗೆಲ್ಸಿದ್ದೀವಿ, ನಿಮ್ಮನ್ನ ಗೆಲ್ಲಿಸಲ್ವಾ. ರಾಜ್ಯದಲ್ಲಿ ಸಿಎಂ ಆದವರನ್ನ ಅವಿರೋಧವಾಗಿ ಆಯ್ಕೆ ಮಾಡಬೇಕು. ಸಿದ್ದರಾಮಯ್ಯ ಐದು ವರ್ಷ ಯಶಸ್ವಿ ಆಡಳಿತ ಕೊಟ್ಟಿದ್ದಾರೆ. ಅಂತವರು ವಿಧಾನಸಭೆಯಲ್ಲಿರಬೇಕು. ಐದು ವರ್ಷಗಳ ಅನುಭವವನ್ನ ಹಂಚಿಕೊಳ್ಳಲು ಅನುಕೂಲ ಆಗುತ್ತದೆ. ನಾನು ಈ ಹಿಂದೆಯೇ ಹೇಳಿದ್ದೆ ಸಿದ್ದರಾಮಯ್ಯ ಹುಣಸೂರಿನಿಂದ ಸ್ಪರ್ಧಿಸಲಿ ಎಂದು ಹೇಳಿ ಅಚ್ಚರಿ ಮೂಡಿಸಿದರು.
ಇದನ್ನೂ ಓದಿ:PSI ಅಕ್ರಮ ನೇಮಕಾತಿಗೆ ಸಂಬಂಧಿಸಿದ ಮಾಹಿತಿ, ದಾಖಲೆಗಳನ್ನ ಸಿಐಡಿಗೆ ಒದಗಿಸಲು ನಾನೇ ಪ್ರಿಯಾಂಕ್ ಖರ್ಗೆ ಬಳಿ ವಿನಂತಿಸಿದ್ದೆ.. ಆರಗ