ಮೈಸೂರು: ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಗೆ ಸಾಕಷ್ಟು ಜನಸಂದಣಿ ಹಾಗೂ ಅಬ್ಬರವಿರುವ ಪರಿಣಾಮ ಹೊಸ ಮೂರು ಆನೆಗಳಿಗೆ ಕೊಕ್ ನೀಡಲಾಗಿದೆ.
ಇದೇ ಮೊದಲ ಬಾರಿಗೆ ಆಗಮಿಸಿದ 1)ಜಯಪ್ರಕಾಶ, 2)ಲಕ್ಷ್ಮಿ (ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಶ್ರೀರಾಂಪುರ ಆನೆ ಶಿಬಿರದಿಂದ ಆಗಮಿಸಿರುವ), 3) ಈಶ್ವರ ಆನೆಗಳಿಗೆ ಜಂಬೂಸವಾರಿ ಮೆರವಣಿಗೆಯಲ್ಲಿ ಕೊಕ್ ನೀಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹೊಸ ಆನೆಗಳನ್ನು ಕೈಬಿಡಲಾಗಿದೆ.
ರಣಬಿಸಿಲಿಗೆ ಡೋಂಟ್ ಕೇರ್: ಬಿಸಿಲಿನ ತಾಪಮಾನ ಬೆಂಕಿಯಂತೆ ಸುಡುತ್ತಿದ್ದರೂ ಪ್ರವಾಸಿಗರು ಜಂಬೂಸವಾರಿಯ ಉತ್ಸವ ಕಣ್ತುಂಬಿಕೊಳ್ಳಲು ಬಿಸಿಲಿಗೆ ಸವಾಲೊಡ್ಡಿದ್ದಾರೆ. ಜಂಬೂಸವಾರಿ ಮೆರವಣಿಗೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಆರಂಭಗೊಳ್ಳಲಿದೆ. ವಿರಾಜಮಾನಳಾಗಿ ಸಾಗುವ ತಾಯಿ ಚಾಮುಂಡೇಶ್ವರಿಯನ್ನು ಕಣ್ತುಂಬಿಕೊಳ್ಳಲು ಜನಸಾಗರ ಪ್ರವಾಹದಂತೆ ಹರಿದು ಬಂದಿದೆ.
ಮೆರವಣಿಗೆಯಿಂದ ಹೊರಗುಳಿದ ಆನೆಗಳು.. 13 ಆನೆಗಳ ಪೈಕಿ 1) ಅರ್ಜುನ, 2 ) ವಿಜಯ, 3) ಅಭಿಮನ್ಯು, 4) ಧನಂಜಯ, 5) ಗೋಪಿ, 6) ದುರ್ಗಾಪರಮೇಶ್ವರಿ, 7) ಬಲರಾಮ, 8) ಕಾವೇರಿ, 9) ವಿಕ್ರಮ, 10) ಗೋಪಾಲಸ್ವಾಮಿ ಆನೆಗಳು ಮಾತ್ರ ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕುತ್ತಿವೆ.