ಮೈಸೂರು:ರಾಜ್ಯಕ್ಕೆ ಮೂವರು ಉಪ ಮುಖ್ಯಮಂತ್ರಿಗಳ ಅವಶ್ಯಕತೆ ಇತ್ತೇ ಎಂಬ ಮಾಧ್ಯಮದವರ ಪ್ರಶ್ನೆಗೆ ಸಿಎಂ ಯಡಿಯೂರಪ್ಪ ಬಳಿಯೂ ಉತ್ತರ ಸಿಗುತ್ತಿಲ್ಲ.
ಮೂರು ಡಿಸಿಎಂ ಸ್ಥಾನ ಯಾಕೆ? ಸಿಎಂ ರಿಂದಲೂ ಸಿಗದ ಉತ್ತರ - ಮೂರು ಉಪ ಮುಖ್ಯಮಂತ್ರಿಗಳು
ರಾಜ್ಯಕ್ಕೆ ಮೂವರು ಉಪ ಮುಖ್ಯಮಂತ್ರಿಗಳನ್ನು ನೇಮಿಸಿರುವ ವಿಚಾರ ಪ್ರತಿಪಕ್ಷಗಳು ಸೇರಿದಂತೆ ಎಲ್ಲರ ಟೀಕೆಗೆ ಗುರಿಯಾಗಿದೆ. ಈಗ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಈ ಬಗ್ಗೆ ಕೇಳಿದ್ರೆ ಅವರಿಂದಲೂ ಉತ್ತರ ಸಿಗುತ್ತಿಲ್ಲ.
ಇಂದು ಚಾಮುಂಡಿ ಬೆಟ್ಟಕ್ಕೆ ಹೋಗಲು ಲಲಿತ್ ಮಹಲ್ ಹೆಲಿಪ್ಯಾಡ್ಗೆ ಆಗಮಿಸಿದ್ದ ಅವರು, ಮಾಧ್ಯಮದವರ ಬಳಿ ಮಾತನಾಡಿದರು. ರಾಜ್ಯದಲ್ಲಿ ಉಂಟಾದ ಪ್ರವಾಹದ ಹಿನ್ನೆಲೆಯಲ್ಲಿ ಮನೆ ಕಳೆದುಕೊಂಡವರಿಗೆ ಶೀಘ್ರವೇ ಪರಿಹಾರ ನೀಡುವಂತೆ ಸೂಚಿಸಿದ್ದೇನೆ. 3-4 ದಿನಗಳಲ್ಲಿ ಕೇಂದ್ರದಿಂದ ನೆರವು ಸಿಗುವ ಸಾಧ್ಯತೆಯಿದೆ ಎಂದರು. ಸೆಪ್ಟಂಬರ್ 7ರಂದು ರಾಜ್ಯಕ್ಕೆ ಪ್ರಧಾನಿಯವರು ಆಗಮಿಸಲಿದ್ದು, ಅವರಿಗೆ ರಾಜ್ಯದಲ್ಲಿ ಉಂಟಾದ ಪ್ರವಾಹ ಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ವೇಳೆ ರಾಜ್ಯಕ್ಕೆ ಮೂವರು ಡಿಸಿಎಂಗಳ ಅವಶ್ಯಕತೆ ಇತ್ತಾ ಅಂತಾ ಮಾಧ್ಯಮದವರು ಪ್ರಶ್ನಿಸಿದರೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ, ಸಿಎಂ ಬಿಎಸ್ವೈ ಹೊರಟು ಹೋದ್ರು.