ಕರ್ನಾಟಕ

karnataka

ETV Bharat / city

ನಾಡಹಬ್ಬ ದಸರಾವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಲಾಗುವುದು: ಸಿಎಂ - ಸಿಎಂ ಬಸವರಾಜ ಬೊಮ್ಮಾಯಿ

ಫ್ರಾನ್ಸ್​​, ರೋಮ್ ದೇಶಗಳ ಮಾದರಿಯಲ್ಲಿ ಮೈಸೂರು ದಸರಾಗೂ ಅಂತಾರಾಷ್ಟ್ರೀಯ ಟೂರಿಸ್ಟ್ ಸರ್ಕ್ಯೂಟ್ ರೂಪಿಸಿ, ಪ್ರಚಾರ ನೀಡಲು ಸಂಬಂಧಿಸಿದ ವ್ಯಕ್ತಿಗಳೊಂದಿಗೆ ಚರ್ಚೆ ನಡೆಸಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೇಳಿದರು.

cm bommai speech in dasara inauguration mysuru
ದೇವಿ ಅವಕಾಶ ಕಲ್ಪಿಸಿದರೆ ಮುಂದಿನ ವರ್ಷ ಅದ್ಧೂರಿ ದಸರಾ: ಸಿಎಂ ಬೊಮ್ಮಾಯಿ

By

Published : Oct 7, 2021, 11:11 AM IST

Updated : Oct 7, 2021, 12:35 PM IST

ಮೈಸೂರು:ವಿಶ್ವವಿಖ್ಯಾತ ನಾಡಹಬ್ಬ ದಸರಾವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಟೂರಿಸಂ ಸರ್ಕ್ಯೂಟ್ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಿಳಿಸಿದರು.

ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, 'ವಿಶ್ವದಲ್ಲಿ ಬೇರೆ, ಬೇರೆ ಹಬ್ಬಗಳನ್ನು ಆಚರಿಸುತ್ತಾರೆ. ಅದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೂರಿಸಂ ಸರ್ಕ್ಯೂಟ್​​ ಮಾಡಿ ಪ್ರಚಾರ ಮಾಡುತ್ತಾರೆ. ಫ್ರಾನ್ಸ್​​, ರೋಮ್ ದೇಶಗಳಲ್ಲಿ ಈ ರೀತಿಯ ಪ್ರಚಾರ ನೀಡಲಾಗುತ್ತದೆ. ಇದೇ ಮಾದರಿಯಲ್ಲಿ ಮೈಸೂರು ದಸರಾಗೂ ಅಂತಾರಾಷ್ಟ್ರೀಯ ಟೂರಿಸ್ಟ್ ಸರ್ಕ್ಯೂಟ್ ರೂಪಿಸಿ, ಪ್ರಚಾರ ನೀಡಲು ಸಂಬಂಧಿಸಿದ ವ್ಯಕ್ತಿಗಳೊಂದಿಗೆ ಚರ್ಚೆ ನಡೆಸಲಾಗುತ್ತದೆ' ಎಂದು ಹೇಳಿದರು.

'ಸುಭಿಕ್ಷ ನಾಡು ಕಟ್ಟಬೇಕು'

'ನಾವು ಸುಭಿಕ್ಷವಾದ ನಾಡನ್ನು ಕಟ್ಟಬೇಕು. ಜನರಲ್ಲಿ ಉತ್ಸಾಹ ತುಂಬುವ ಕೆಲಸ ಆಗಬೇಕು. ಸರಿಯಾಗಿ ಮಳೆ ಬೆಳೆ ಬಂದು, ರೈತ ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಕ್ಕಿ, ಅವನ ಮಕ್ಕಳಿಗೆ ವಿದ್ಯಾಭ್ಯಾಸ ಸಿಕ್ಕಿ, ಶ್ರಮಜೀವಿಗಳಿಗೆ ಎಲ್ಲಾ ರೀತಿಯ ಅವಕಾಶ ದೊರೆತು ಈ ನಾಡು ಸಂಪದ್ಭರಿತವಾಗಿದೆ.‌ ಈ ನಾಡಿನ ಜನತೆ ಸುಖದ ಬದುಕು ನಡೆಸಿದಾಗ ಮಾತ್ರ ಸಂಭ್ರಮದ ದಸರಾ ಆಗಬಲ್ಲದು' ಎಂದರು.

ಸಿಎಂ ಬಸವರಾಜ ಬೊಮ್ಮಾಯಿ

ಯಶಸ್ವಿನಿ ಯೋಜನೆ ಮತ್ತೆ ಜಾರಿ:

;ನಾಡಿನ ಅನ್ನದಾತರಾದ ರೈತರ ಆರೋಗ್ಯವನ್ನು ಕಾಪಾಡುವ ಯಶಸ್ವಿ ಯೋಜನೆಯನ್ನು ರಾಜ್ಯದಲ್ಲಿ ಮತ್ತೆ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ. ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು ನಾಡಿನ ರೈತರ ಆರೋಗ್ಯ ಕಾಪಾಡಲು ಯಶಸ್ವಿ ಯೋಜನೆ ಜಾರಿಗೆ ತಂದರು. ಆದರೆ ಈ ಯೋಜನೆ ನಿಂತು ಹೋಗಿದೆ. ಇದನ್ನು ಮತ್ತೆ ಜಾರಿಗೆ ತರಲು ಸಹಕಾರಿ ಸಚಿವರೊಂದಿಗೆ ಚರ್ಚಿಸಿದ್ದೇನೆ. ಆದರೆ ಈಗ ಕೋವಿಡ್ ಕಾರಣದಿಂದ ಹಣಕಾಸಿನ ಕೊರತೆಯಿದೆ. ಹಾಗಾಗಿ ಯೋಜನೆಯನ್ನು ಪ್ರಾರಂಭ ಮಾಡಲು ಆಗಿಲ್ಲ. ಹಣಕಾಸು ಸ್ಥಿತಿ ಸುಧಾರಣೆಯಾದರೆ ಯಶಸ್ವಿ ಯೋಜನೆಯನ್ನು ಮತ್ತೆ ಪ್ರಾರಂಭಿಸುತ್ತೇವೆ' ಎಂದು ತಿಳಿಸಿದರು.

ನಾಲೆಗಳ ಆಧುನೀಕರಣ:

'ಜಲಸಂಪನ್ಮೂಲ ಸಚಿವನಾಗಿದ್ದಾಗ ನೀರಾವರಿಯ ಕೆಲಸ ಕಾರ್ಯ ವೀಕ್ಷಿಸಲು ಕೆಆರ್​​ಎಸ್‌ಗೆ ಬಂದಿದ್ದೆ. ಗೇಟ್​ನಲ್ಲಿ ರಂಧ್ರ ಬಿದ್ದು ನೀರು ಹರಿದುಹೋಗುತ್ತಿತ್ತು. ಗೇಟ್​​ಗಳು 40 ವರ್ಷಕ್ಕೂ ಹಳೆಯದ್ದಾಗಿದ್ದು, ನೀರು ತಡೆಯಲು ಗೋಣಿಚೀಲ ಇಟ್ಟಿದ್ದರು. ತುಂಗಭದ್ರಾ ಸ್ಟೀಲ್ ಕಂಪನಿಯ ಇಂಜಿನಿಯರ್​ನನ್ನು ಕರೆ ತಂದು 16 ಗೇಟ್​​ಗಳನ್ನು ಹೊಸದಾಗಿ ಹಾಕಿದ್ದೆವು. 11 ಅಣೆಕಟ್ಟುಗಳ ನಾಲೆಗಳನ್ನು ಸಂಪೂರ್ಣ ಆಧುನೀಕರಣ ಮಾಡಿದ್ದೇನೆ.

ವಿಸಿ ನಾಲೆ ಡಿಸ್ಟ್ರಿಬ್ಯೂಷನ್ ಆಗಿರಲಿಲ್ಲ, ಡಿಸ್ಟ್ರಿಬ್ಯೂಟ್ ಕೆಲಸ ಮಾಡಿದ್ದೇವೆ. ವರುಣಾ ನಾಲೆ 100 ಕಿ.ಮೀ ಆಗಿದೆ. ಸೇವೆ ಮಾಡುವ ಅವಕಾಶ ಸಿಕ್ಕಿದ್ದು ಸಣ್ಣ ಸಂತೃಪ್ತಿ. ಇವತ್ತಿನ ಸವಾಲುಗಳು, ಆರ್ಥಿಕ ಹಿಂಜರಿಕೆ ಅವಧಿಯಲ್ಲಿ ಇತರ ರಾಜ್ಯಗಳ ಜೊತೆಗೆ ನಾವೂ ಕೂಡ ಅಭಿವೃದ್ಧಿ ಹೊಂದಬೇಕೆನ್ನುವ ಚಿಂತನೆ ಇದೆ. ಹಲವಾರು ಬದಲಾವಣೆ ಮಾಡಿ ಆರ್ಥಿಕ ಬದಲಾವಣೆ ತಂದು ನಾಡಿನ ಸಮಗ್ರ ಅಭಿವೃದ್ಧಿ ಮಾಡಲಾಗುವುದು. ಮೈಸೂರು ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅವಶ್ಯಕತೆ ಇದೆ. ಎಲ್ಲಾ ರೀತಿಯ ವಿಸ್ತರಣೆಗೆ ಕ್ರಮ ತೆಗೆದುಕೊಳ್ಳುತ್ತೇವೆ' ಎಂದು ಸಿಎಂ ತಿಳಿಸಿದರು.

'ಜನಪರ ಆಡಳಿತ ನೀಡಲು ಕಂಕಣಬದ್ದ':

'ನಾನು ಒಬ್ಬನೇ ಮಾಡುತ್ತೇನೆ ಎಂದರೆ ಮೂರ್ಖತನ. ನಾವೆಲ್ಲರೂ ಸೇರಿ ಮಾಡುತ್ತೇವೆ ಎಂದರೆ ಅದಕ್ಕೊಂದು ಅರ್ಥ. ನಮ್ಮದು ಟೀಮ್ ವರ್ಕ್, ಆರ್ಥಿಕ ಪ್ರಗತಿ ಮಾಡಿ ಜನ ಮೆಚ್ಚುವ ಕೆಲಸ ಮಾಡುತ್ತೇವೆ. ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವ ಕೆಲಸ ಮಾಡಿದ್ದೇವೆ. ವಿಶೇಷ ಸ್ವಚ್ಛ, ದಕ್ಷ ಜನಪರ ಆಡಳಿತ ನೀಡಲು ಕಂಕಣ ಬದ್ಧರಾಗಿದ್ದೇವೆ' ಎಂದು ಪ್ರಮಾಣ ಮಾಡಿದರು.

'ಸಿಎಂ ಡ್ಯಾಶ್ ಬೋರ್ಡ್ ಮಾಡಿದ್ದು ಎಲ್ಲಾ ಯೋಜನೆಗಳು ನಮ್ಮ ಕಣ್ಣ ಮುಂದಿರಬೇಕು. ಇದರಿಂದ ಹಲವಾರು ನಿರ್ದೇಶನಗಳನ್ನು ಕಾಲಕಾಲಕ್ಕೆ ನೀಡಲು ಸಾಧ್ಯವಾಗಲಿದೆ. ಕರ್ನಾಟಕದಲ್ಲಿ ಹೊಸ ಅಭಿವೃದ್ಧಿಯ ಯುಗ ಆರಂಭವಾಗಲಿದೆ. ಕಳೆದೆರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಕಳೆಗುಂದಿದೆ. ತಾಯಿ ಆಶಿರ್ವಾದದೊಂದಿಗೆ ಮುಂದಿನ ವರ್ಷ ಅತ್ಯಂತ ವೈಭವಪೂರಿತವಾಗಿ ಆಚರಿಸಲು ಅವಕಾಶ ಮಾಡಿಕೊಡುವಂತೆ ತಾಯಿಯಲ್ಲಿ ಪ್ರಾರ್ಥಿಸಿದ್ದೇವೆ. ಅವಕಾಶ ಕೊಟ್ಟರೆ ವೈಭವಯುತವಾಗಿ ಮಾಡುತ್ತೇವೆ' ಎಂದರು.‌

ದಸರಾ ಉದ್ಘಾಟನೆಗೆ ಎಸ್​ಎಂಕೆ ಆಯ್ಕೆ:

'ನಾಡಹಬ್ಬ ಉದ್ಘಾಟನೆ ಮಾಡಿದರೆಲ್ಲಾ ಬದುಕನ್ನು ಆದರ್ಶಪ್ರಾಯವಾಗಿಸಿಕೊಂಡವರು. ಹಲವಾರು ಮೌಲ್ಯ ಬಿಟ್ಟ ಹೋದವರು. ಅಪಾರ ಕೊಡುಗೆ ನೀಡಿದವರು. ಅದೇ ರೀತಿ ಎಸ್.ಎಂ.ಕೃಷ್ಣ ಅವರೂ ಕೂಡ ಧೀಮಂತ ನಾಯಕರಾಗಿದ್ದಾರೆ.

ಸಜ್ಜನ ಪ್ರಾಮಾಣಿಕ, ಜನಸೇವೆ ಮಾಡಿದ ಎಸ್.ಎಂ.ಕೃಷ್ಣ ಅವರನ್ನು ಆಯ್ಕೆ ಮಾಡಿದರೆ ಎಲ್ಲರೂ ಸ್ವಾಗತಿಸುತ್ತಾರೆಂಬ ನಂಬಿಕೆಯಿತ್ತು. ಕನ್ನಡಿಗರು ದೊಡ್ಡ ಪ್ರಮಾಣದಲ್ಲಿ ಒಪ್ಪಿಕೊಂಡಿದ್ದಾರೆ. ಜನರ ಒಪ್ಪಿಗೆಯ ಮುದ್ರೆ ಸಿಕ್ಕಿದೆ. ಅವರು ಸಿಎಂ ಆಗಿದ್ದಾಗತೆಗೆದುಕೊಂಡ ನಿರ್ಣಯಗಳನ್ನು ಜನತೆ ಇಂದಿಗೂ ಸ್ಮರಿಸುತ್ತಾರೆ. ಮುಂದಿನ ದಿನಗಳಲ್ಲಿ ಇನ್ನೂ ವಿವಿಧ ಸಾಧಕರನ್ನು ಗುರುತಿಸಿ ಮಾಡಿಸಲಾಗುವುದು. ಕೆಲಸ ಮಾಡುವುದು ಸಹಜ. ನಾಡಿಗಾಗಿ ನಾಡ ಜನತೆಗಾಗಿ ಬದುಕನ್ನು ಮುಡಿಪಿಡುವವರು ವಿರಳ' ಎಂದು ಸಿಎಂ ತಿಳಿಸಿದರು.

ಇದನ್ನೂ ಓದಿ:ಪ್ರಧಾನಿ ಮೋದಿ ದೇಶದ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದ್ದಾರೆ: ಮಾಜಿ ಸಿಎಂ ಎಸ್​.ಎಂ.ಕೃಷ್ಣ

Last Updated : Oct 7, 2021, 12:35 PM IST

ABOUT THE AUTHOR

...view details