ಮೈಸೂರು:ಎರಡು ತಿಂಗಳಿನಿಂದ ವ್ಯಾಪಾರವಿಲ್ಲದೆ ಕಂಗೆಟ್ಟಿರುವ ಬಟ್ಟೆ ವ್ಯಾಪಾರಿಗಳು ಕೆ.ಟಿ. ಸ್ಟ್ರೀಟ್ನಲ್ಲಿ ಬಟ್ಟೆ ಅಂಗಡಿ ತೆರೆಯುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಲೀಕರು ಹಾಗೂ ಪೊಲೀಸರ ನಡುವೆ ನಗರದಲ್ಲಿ ಮಾತಿನ ಚಕಮಕಿ ನಡೆದಿದೆ.
ದಿನಸಿ ಅಂಗಡಿ, ಸಿಮೆಂಟ್, ಕಬ್ಬಿಣ ಸೇರಿದಂತೆ ಕೆಲ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಆದರೆ, ಬಟ್ಟೆ ಅಂಗಡಿ ತೆರೆಯಲು ಅವಕಾಶ ನೀಡದೆ ಇರುವುದರಿಂದ ಎರಡು ತಿಂಗಳಿಂದ ಅಂಗಡಿ ಮುಚ್ಚಿ ತುಂಬಾ ನಷ್ಟವಾಗಿದೆ. ಅಂಗಡಿ ಬಾಡಿಗೆ ಕಟ್ಟಲು ಆಗುತ್ತಿಲ್ಲ ಹಾಗೂ ನೌಕರರು ಸಂಬಳ ಕೊಡಲು ಆಗುತ್ತಿಲ್ಲ ಎಂದು ಮಾಲೀಕರು ಪೊಲೀಸರ ಮುಂದೆ ತಮ್ಮ ಅಳಲು ತೋಡಿಕೊಂಡರು.
ಬಟ್ಟೆ ಅಂಗಡಿ ತೆರೆಯಲು ಅವಕಾಶ ನೀಡುವಂತೆ ಪೊಲೀಸರರೊಂದಿಗೆ ಮಾಲೀಕರ ವಾಗ್ವಾದ ಇದಕ್ಕೆ ಸಮಜಾಯಿಷಿ ನೀಡಿದ ಪೊಲೀಸರು, ಜಿಲ್ಲಾಡಳಿತ ಯಾವ ಸೂಚನೆ ನೀಡುತ್ತದೆಯೋ ಅದನ್ನು ಪಾಲಿಸಿ. ಜಿಲ್ಲಾಧಿಕಾರಿಗಳಿಗೆ ನೀವು ಮನವಿ ಕೊಡಿ. ಆದರೆ, ರಸ್ತೆಗೆ ಬಂದು ಗುಂಪುಗೂಡುವುದು ಸರಿಯಲ್ಲ ಎಂದು ತಿಳಿಹೇಳಿದರು. ಜೊತೆಗೆ ತೆರೆದಿದ್ದ ಅಂಗಡಿಯನ್ನು ಕೂಡ ಮುಚ್ಚಿಸಿದರು.
ಸಾರಿಗೆ ಬಸ್ ಸಂಚಾರ ಆರಂಭ
ಜಿಲ್ಲೆಯಾದ್ಯಂತ ಅನ್ಲಾಕ್ ಹಿನ್ನೆಲೆಯಲ್ಲಿ ಸಾರಿಗೆ ಬಸ್ ಸಂಚಾರ ಆರಂಭವಾಗಿದ್ದು, ಬೆರಳೆಣಿಕೆಯಷ್ಟು ಪ್ರಯಾಣಿಕರು ಬಸ್ ನಿಲ್ದಾಣದತ್ತ ಆಗಮಿಸುತ್ತಿದ್ದಾರೆ. ಕೊರೊನಾ ಆರಂಭಕ್ಕೂ ಮುನ್ನ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಪ್ರತಿನಿತ್ಯ 1,800 ಟ್ರಿಪ್ಗಳ ಬಸ್ ಸಂಚಾರವಾಗುತ್ತಿತ್ತು. ಆದರೆ, ಇಂದು ಬೆಳಗ್ಗೆ 100 ಟ್ರಿಪ್ಗಳಾಗಿದ್ದು, ಕೊರೊನಾದಿಂದ ಆತಂಕಗೊಂಡಿರುವ ಪ್ರಯಾಣಿಕರು ಬಸ್ ನಿಲ್ದಾಣದತ್ತ ಸುಳಿಯುತ್ತಿಲ್ಲ.
ಬೆಂಗಳೂರಿಗೆ ಅತಿ ಹೆಚ್ಚು ಜನರು ಪ್ರಯಾಣ ಮಾಡುತ್ತಿದ್ದು, ಕೇರಳ ಹಾಗೂ ತಮಿಳುನಾಡು ಬಸ್ ಸಂಚಾರವಿಲ್ಲ. ಹೈದರಾಬಾದ್ ಕಡೆಗೆ ಒಂದೇ ಬಸ್ ಆರಂಭಗೊಂಡಿದೆ. ಆನ್ಲೈನ್ ಟಿಕೆಟ್ ಖರೀದಿಗೂ ಅವಕಾಶ ನೀಡಲಾಗಿದೆ. ಎರಡು ತಿಂಗಳ ಬಳಿಕ ಗ್ರಾಮಾಂತರ ಬಸ್ ನಿಲ್ದಾಣದಲ್ಲಿರುವ ಅಂಗಡಿಗಳು ತೆರೆದಿವೆ.
ಇದನ್ನೂ ಓದಿ:ರೇಖಾ ಕದಿರೇಶ್ ಹತ್ಯೆ ಕೇಸ್: ರೌಡಿ ಆತುಷ್ ವಿಚಾರಣೆಗೆ ಆಗ್ರಹಿಸಿ ಕಮಿಷನರ್ಗೆ ದೂರು