ಕರ್ನಾಟಕ

karnataka

ETV Bharat / city

ಗಜಪಡೆ ಸ್ವಾಗತಕ್ಕೆ ಸಜ್ಜಾದ ಅರಮನೆ... ಸ್ವಚ್ಛಗೊಂಡ ಆನೆ ಲಾಯ, ಸಿಸಿ ಕ್ಯಾಮೆರಾ ಕಾವಲು - ಆನೆಗಳು

ಕ್ಯಾಪ್ಟನ್ ಅರ್ಜುನ ನೇತೃತ್ವದ ತಂಡದ ವಿಜಯ, ಅಭಿಮನ್ಯು, ವರಲಕ್ಷಿ, ಧನಂಜಯ ಹಾಗೂ ಈಶ್ವರ ಆನೆಗಳು ಇಂದು ಅರಣ್ಯ ಭವನಕ್ಕೆ ಆಗಮಿಸಿ‌ದ್ದು, ಅರಮನೆ ಆವರಣದಲ್ಲಿ ಆನೆಗಳಿಗೆ ಶೆಡ್​​ ನಿರ್ಮಿಸಿ ಆನೆ ಕಟ್ಟುವ ಸ್ಥಳವನ್ನು ಸ್ವಚ್ಛಗೊಳಿಸಲಾಗುತ್ತಿದೆ.

ಅರಮನೆ ಆವರಣದಲ್ಲಿ ಭರದಿಂದ ಸಾಗಿದ ಸ್ವಚ್ಛತಾ ಕಾರ್ಯ

By

Published : Aug 22, 2019, 7:11 PM IST

ಮೈಸೂರು: ಗಜಪಯಣ ಆರಂಭವಾಗುತ್ತಿದ್ದಂತೆ ಅರಮನೆ ಆವರಣದಲ್ಲಿ ಆನೆ ಲಾಯ ಸ್ವಚ್ಛಗೊಳಿಸಲಾಗುತ್ತಿದೆ.

ಕ್ಯಾಪ್ಟನ್ ಅರ್ಜುನ ನೇತೃತ್ವದ ತಂಡದ ವಿಜಯ, ಅಭಿಮನ್ಯು, ವರಲಕ್ಷಿ, ಧನಂಜಯ ಹಾಗೂ ಈಶ್ವರ ಆನೆಗಳು ಇಂದು ಅರಣ್ಯ ಭವನಕ್ಕೆ ಆಗಮಿಸಿ‌ದ್ದು, ಆಗಸ್ಟ್‌ 26 ರಂದು ಅರಮನೆಗೆ ಧಾರ್ಮಿಕ ವಿಧಿವಿಧಾನಗಳ ಮೂಲಕ ಬರಮಾಡಿಕೊಳ್ಳಲಾಗುವುದು.

ಅರಮನೆ ಆವರಣದಲ್ಲಿ ಭರದಿಂದ ಸಾಗಿದ ಸ್ವಚ್ಛತಾ ಕಾರ್ಯ

ಗಜಪಡೆಗಾಗಿ ಶೆಡ್​​ಗಳನ್ನು ನಿರ್ಮಿಸಲಾಗಿದ್ದು, ಆನೆ ಕಟ್ಟುವ ಕಂಬಗಳು ಗಟ್ಟಿಯಾಗಿರಲಿ ಎಂದು ಸಿಮೆಂಟ್ ಮೂಲಕ ಕಂಬಗಳನ್ನು ಮತ್ತಷ್ಟು ಬಿಗಿಗೊಳಿಸಲಾಗುತ್ತಿದೆ. ಅರ್ಜುನ ಆನೆಗಾಗಿ ಪ್ರತ್ಯೇಕವಾಗಿ ಶೆಡ್​​ ನಿರ್ಮಾಣವಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಿ ಸಿಸಿ ಕ್ಯಾಮೆರಾ ಕೂಡ ಅಳವಡಿಸಲಾಗುವುದು.

ಅಷ್ಟೇ ಅಲ್ಲದೇ ಮಾವುತ ಹಾಗೂ ಕಾವಾಡಿಗಳ ಕುಟುಂಬದವರಿಗೂ ಶೆಡ್​​ಗಳು ರೆಡಿಯಾಗುತ್ತಿವೆ. ಅವರ ಆರೋಗ್ಯ ಸಮಸ್ಯೆಗಳನ್ನು ವಿಚಾರಿಸಲು ಅಲ್ಲಿ ಕ್ಲಿನಿಕ್ ಕೂಡ ತೆರೆಯಲಾಗುತ್ತಿದೆ‌. ಅಲ್ಲದೇ ಮಕ್ಕಳಿಗಾಗಿ ಟೆಂಟ್ ಶಾಲೆಯನ್ನೂ ನಿರ್ಮಿಸಲಾಗುತ್ತಿದೆ.

ABOUT THE AUTHOR

...view details