ಕರ್ನಾಟಕ

karnataka

ETV Bharat / city

ಮೈಸೂರಿನ ಸರ್ಕಾರಿ ಕಚೇರಿಯ ಮುಂಭಾಗ ಅಗ್ನಿಶಾಮಕ ದಳದಿಂದ ಸ್ವಚ್ಛತಾ ಕಾರ್ಯ - ಕೊರೊನಾ ಸುದ್ದಿ

ಮೈಸೂರು ಜಿಲ್ಲೆಯಲ್ಲಿ ಕೊರೊನಾ ಭೀತಿ ಹೆಚ್ಚುತ್ತಿದೆ. ಈ ಹಿನ್ನೆಲೆ ಮೈಸೂರಿನ ಸರ್ಕಾರಿ ಕಚೇರಿ ಮುಂಭಾಗದಲ್ಲಿ ಔಷಧಿ ಸಿಂಪಡಿಸಲಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ ನಗರದ ಹಲವೆಡೆ ರಾಸಾಯನಿಕ ಸಿಂಪಡಿಸಿ ಸ್ವಚ್ಛತಾ ಕಾರ್ಯ ಕೈಗೊಂಡರು.

Cleaning work by Fire Brigade officers in front of Mysore Government Office
ಮೈಸೂರಿನ ಸರ್ಕಾರಿ ಕಚೇರಿಯ ಮುಂಭಾಗ ಅಗ್ನಿಶಾಮಕ ದಳದಿಂದ ಸ್ಚಚ್ಛತಾ ಕಾರ್ಯ

By

Published : Apr 25, 2020, 4:27 PM IST

ಮೈಸೂರು: ಕೊರೊನಾದ ಹಾಟ್​ಸ್ಪಾಟ್ ಆಗಿರುವ ನಗರದಲ್ಲಿ ಸರ್ಕಾರಿ ಕಚೇರಿಗಳ ಮುಂಭಾಗ ರಾಸಾಯನಿಕ ಸಿಂಪಡಿಸಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಸಾರ್ವಜನಿಕರು ಹೆಚ್ಚಾಗಿ ಬರುವ ಸರ್ಕಾರಿ ಕಚೇರಿ ಮೂಡಾ ಇಲಾಖೆ ಮುಂಭಾಗ ಇಂದು ಅಗ್ನಿಶಾಮಕ ವಾಹನದಲ್ಲಿ ರಾಸಾಯನಿಕವನ್ನು ಪಾರ್ಕ್, ರಸ್ತೆ, ಮೂಡಾ ಕಚೇರಿಯ ಮುಂಭಾಗದಲ್ಲಿ ಸಿಂಪಡಿಸುವ ಮೂಲಕ ಸ್ವಚ್ಛತೆ ಕೈಗೊಳ್ಳಲಾಯಿತು.

ಮೈಸೂರಿನ ಸರ್ಕಾರಿ ಕಚೇರಿಯ ಮುಂಭಾಗ ಅಗ್ನಿಶಾಮಕ ದಳದಿಂದ ಸ್ವಚ್ಛತಾ ಕಾರ್ಯ

ಮೈಸೂರು ಈಗಾಗಲೇ ಕೊರೊನಾ ವೈರಸ್​ ಹಾಟ್​ಸ್ಪಾಟ್ ಆಗಿದ್ದು, ನಗರದ 12 ಏರಿಯಾಗಳನ್ನು ಕಂಟೈನ್ಮೆಂಟ್ ಝೋನ್ ಆಗಿ ಘೋಷಣೆ ಮಾಡಿದ್ದು, ಅಲ್ಲೂ ಸಹ ರಾಸಾಯನಿಕ ಸಿಂಪಡಿಸಿ, ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗಿದೆ.

ABOUT THE AUTHOR

...view details