ಕರ್ನಾಟಕ

karnataka

ETV Bharat / city

ಒಂದು ರೂಪಾಯಿ ನಾಣ್ಯ ನುಂಗಿದ ಮಗು ಸಾವು - 4 year old girl dies by swallowing coin

ಅಜ್ಜಿ ಮನೆಯಲ್ಲಿ ಆಟವಾಡುವ ವೇಳೆ ಆಕಸ್ಮಿಕವಾಗಿ 1 ರೂ‌. ನಾಣ್ಯ ನುಂಗಿದ ನಾಲ್ಕು ವರ್ಷದ ಹೆಣ್ಣು ಮಗು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ.

Child died after swallowing a 5 rupee coin
ಒಂದು ರೂಪಾಯಿ ನಾಣ್ಯ ನುಂಗಿದ ಮಗು ಸಾವು

By

Published : Sep 6, 2021, 10:06 AM IST

Updated : Sep 6, 2021, 6:58 PM IST

ಮೈಸೂರು:1 ರೂಪಾಯಿ ನಾಣ್ಯ ನುಂಗಿ ಆಸ್ಪತ್ರೆಗೆ ದಾಖಲಾಗಿದ್ದ ಮಗು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ಹುಣಸೂರು ತಾಲೂಕಿನ ಆಯರಹಳ್ಳಿ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಬಿಳಿಕೆರೆ ಹೋಬಳಿಯ ಆಯರಹಳ್ಳಿಯ ನಾಲ್ಕು ವರ್ಷದ ಹೆಣ್ಣು ಮಗು ಖುಷಿ ಮೃತ ದುರ್ದೈವಿ. ಖುಷಿ ಬಿಳಿಕೆರೆ ಬಳಿಯ ಹಿರಿಕ್ಯಾತನಹಳ್ಳಿಯ ತಾತನ ಮನೆಗೆ ಶುಭ ಕಾರ್ಯಕ್ಕೆ ತಂದೆ-ತಾಯಿಯೊಂದಿಗೆ ಬಂದಿದ್ದಳು.‌

ಬುಧವಾರ ತಾತನ ಮನೆಯಲ್ಲಿ ಶುಭ ಕಾರ್ಯ ಮುಗಿಸಿ, ತಂದೆ ದಿನೇಶ್ ಗುರುವಾರ ತಮ್ಮ ಆಯರಹಳ್ಳಿ ಗ್ರಾಮಕ್ಕೆ ಹೋಗುತ್ತಿದ್ದರು. ಈ ವೇಳೆ ಖುಷಿ ಚಾಕೊಲೇಟ್ ತೆಗೆದುಕೊಳ್ಳಲು ತಂದೆಯಿಂದ ಒಂದು ರೂಪಾಯಿ ಬೇಕೆಂದು ಹಠ ಮಾಡಿ ಪಡೆದಳು. ತಂದೆ ಹತ್ತು ರೂಪಾಯಿ ಕೊಡಲು ಹೋದಾಗ ಬೇಡ ಎಂದು ಒಂದು ರೂಪಾಯಿ ನಾಣ್ಯ ಪಡೆದು, ಅದರಲ್ಲಿ ಆಡವಾಡುತ್ತಾ ಆಕಸ್ಮಿಕವಾಗಿ ಗುರುವಾರ ರಾತ್ರಿ ನಾಣ್ಯವನ್ನು ನುಂಗಿದ್ದಾಳೆ.

ಆದರೆ, ಈ ವಿಷಯ ಮನೆಯವರಿಗೆ ತಿಳಿದಿಲ್ಲ. ಗುರುವಾರ ರಾತ್ರಿ ಉಸಿರಾಟದಲ್ಲಿ ತೊಂದರೆಯಾಗಿದೆ. ಇದರಿಂದ ಶುಕ್ರವಾರ ಬೆಳಿಗ್ಗೆ ಕೆ.ಆರ್.ನಗರದ ಖಾಸಗಿ ಕ್ಲಿನಿಕ್​ಗೆ ಮಗುವನ್ನು ತೋರಿಸಿದ್ದಾರೆ. ಅವರು ಸ್ಕ್ಯಾನಿಂಗ್ ಮಾಡಿದಾಗ ಗಂಟಲಲ್ಲಿ ನಾಣ್ಯ ಇರುವುದು ಪತ್ತೆಯಾಗಿದೆ.

ತಕ್ಷಣ ಮೈಸೂರಿನ ಸರ್ಕಾರಿ ಮಕ್ಕಳ ಆಸ್ಪತ್ರೆಗೆ ದಾಖಲು ಮಾಡಿದ್ದು, ಶುಕ್ರವಾರ ರಾತ್ರಿ ನಾಣ್ಯವನ್ನು ಹೊರತೆಗೆದಿದ್ದಾರೆ. ಎರಡು ದಿನ ಆಸ್ಪತ್ರೆಯಲ್ಲಿ ಇದ್ದ ಮಗು ಭಾನುವಾರ ಮೃತಪಟ್ಟಿದೆ.

ಇದನ್ನೂ ಓದಿ:ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಒಡೆತನದ ಫೆರಾರಿ ಕಾರು‌ ಡಿವೈಡರ್​ಗೆ ಡಿಕ್ಕಿ

ವೈದ್ಯರು ಹೇಳೋದೇನು?

ಚಿಕ್ಕಮಕ್ಕಳಲ್ಲಿ ಅಂದರೆ ಐದು ವರ್ಷದ ಒಳಗಿನ ಮಕ್ಕಳು ನಾಣ್ಯ ರೀತಿಯ ವಸ್ತುಗಳನ್ನು ನುಂಗಿದಾಗ ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ನೀರು ಮತ್ತೆ ಇತರ ವಸ್ತುಗಳನ್ನು ಕುಡಿಸಿದರು ಆ ವಸ್ತು ಜಠರ ಸೇರುವುದಿಲ್ಲ. ಆದ್ದರಿಂದ ಚಿಕ್ಕಮಕ್ಕಳಲ್ಲಿ ಸಾವು ಸಂಭವಿಸುತ್ತದೆ. ಆದರೆ ದೊಡ್ಡವರಲ್ಲಿ ಈ ರೀತಿ ಆಗುವುದಿಲ್ಲ. ಇದನ್ನು ಸಲೀಸಾಗಿ ತೆಗೆಯಬಹುದು ಎಂದು ಕೆ.ಆರ್‌.ಆಸ್ಪತ್ರೆಯ ಮುಖ್ಯಸ್ಥರಾದ ಡಾ.ರಾಜೇಶ್ ತಿಳಿಸಿದರು.

Last Updated : Sep 6, 2021, 6:58 PM IST

ABOUT THE AUTHOR

...view details