ಕರ್ನಾಟಕ

karnataka

By

Published : Apr 23, 2022, 1:17 PM IST

ETV Bharat / city

ಮೈಸೂರು : ಪೆಟ್ರೋಲ್ ಬಂಕ್‌ನಲ್ಲಿ ಗ್ರಾಹಕನಿಗೆ ಮೋಸ

ಬೈಕ್ ಸವಾರನೋರ್ವ ತಾನು ತಂದ ಬಾಟಲ್‌ಗೆ 100 ರೂ. ಪೆಟ್ರೋಲ್ ಹಾಕಲು ಹೇಳಿದ್ದ. ಈ ವೇಳೆ 100 ರೂಪಾಯಿಗೆ ಕೇವಲ ಅರ್ಧ ಲೀಟರ್ ಪೆಟ್ರೋಲ್ ದೊರೆತಿದೆ. ಈ ಬಗ್ಗೆ ಬೈಕ್ ಸವಾರ ಪೆಟ್ರೋಲ್ ಬಂಕ್ ಮಾಲೀಕರಲ್ಲಿ ಪ್ರಶ್ನಿಸಿದ್ದ. ಆಗ ಪೆಟ್ರೋಲ್ ಬಂಕ್‌ನ ಮಾಲೀಕ ಸವಾರನಿಗೆ ಆವಾಜ್ ಹಾಕಿರುವ ಘಟನೆ ನಡೆದಿದೆ..

cheating-for-a-customer-at-a-petrol-bunk
ಮೈಸೂರು : ಪೆಟ್ರೋಲ್ ಬಂಕ್ ನಲ್ಲಿ ಗ್ರಾಹಕನಿಗೆ ಮೋಸ

ಮೈಸೂರು :ಬೈಕ್ ಸವಾರನೋರ್ವ ತಾನು ತಂದ ಬಾಟಲಿಗೆ 100 ರೂ. ಪೆಟ್ರೋಲ್ ಹಾಕಲು ಹೇಳಿದ್ದ. ಆದರೆ, ಈ ವೇಳೆ 100 ರೂಪಾಯಿಗೆ ಕೇವಲ ಅರ್ಧ ಲೀಟರ್ ಪೆಟ್ರೋಲ್ ದೊರೆತಿದೆ. ಈ ಬಗ್ಗೆ ಬೈಕ್ ಸವಾರ ಪೆಟ್ರೋಲ್ ಬಂಕ್ ಮಾಲೀಕರಲ್ಲಿ ಪ್ರಶ್ನಿಸಿದ್ದ. ಆಗ ಪೆಟ್ರೋಲ್ ಬಂಕ್‌ನ ಮಾಲೀಕ ಸವಾರನಿಗೆ ಆವಾಜ್ ಹಾಕಿರುವ ಘಟನೆ ನಡೆದಿದೆ. ಮೈಸೂರು ತಾಲೂಕಿನ ಬೀರಿಹುಂಡಿಯಲ್ಲಿರುವ ಎಸ್ಸಾರ್ ಪೆಟ್ರೋಲ್ ಬಂಕ್‌ನಲ್ಲಿ ಈ ಘಟನೆ ನಡೆದಿದೆ. ಪೆಟ್ರೋಲ್ ಬಂಕ್ ಮಾಲೀಕ ಗಿರೀಶ್ ಈ ಬಗ್ಗೆ ಪ್ರಶ್ನಿಸಿದ ಬೈಕ್ ಸವಾರನಿಗೆ ಆವಾಜ್ ಹಾಕಿದ್ದಾನೆ.

ಬೈಕ್ ಸವಾರ ಬಾಟಲ್‌ಗೆ ನೂರು ರೂ. ಪೆಟ್ರೋಲ್ ಹಾಕಿಸಿಕೊಂಡಿದ್ದ. ಈ ವೇಳೆ ಪೆಟ್ರೋಲ್ ದೊರೆತಿದ್ದು ಕೇವಲ ಅರ್ಧ ಲೀಟರ್ ಮಾತ್ರ. ಈ ಬಗ್ಗೆ ಬೈಕ್ ಸವಾರ ಪೆಟ್ರೋಲ್ ಹಾಕಿದ ಹುಡುಗನನ್ನು ಪ್ರಶ್ನಿಸಿದ್ದಾನೆ. ಆಗ ಮಧ್ಯಪ್ರವೇಶಿಸಿದ ಪೆಟ್ರೋಲ್ ಬಂಕ್ ಮಾಲೀಕ ಬೈಕ್ ಸವಾರನಿಗೆ ಗದರಿಸಿದ್ದಾನೆ. ಈ ಘಟನೆಯನ್ನು ಬೈಕ್ ಸವಾರ ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ.

ಪೆಟ್ರೋಲ್ ಬಂಕ್‌ನಲ್ಲಿ ಗ್ರಾಹಕನಿಗೆ ಮೋಸ..

ಓದಿ :ಭೂ ನಕ್ಷೆ ತಯಾರಿಸಲು 'ಸ್ವಾವಲಂಬಿ ಆ್ಯಪ್': ಕಂದಾಯ ಇಲಾಖೆಯ ಹೊಸ ಸೇವೆ

ABOUT THE AUTHOR

...view details