ಮೈಸೂರು: ಕೊರೊನಾ ಪ್ರಚೋದಿತ ಲಾಕ್ಡೌನ್ನಿಂದ ಚಾಮುಂಡಿ ಬೆಟ್ಟದಲ್ಲಿ ಭಕ್ತರ ಸಂಖ್ಯೆ ಇಳಿಮುಖವಾಗಿತ್ತು. ಆದರೆ ಈಗ ಲಾಕ್ಡೌನ್ ಸಡಿಲಿಕೆಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 38 ದಿನಗಳಲ್ಲಿ 1.14 ಕೋಟಿ ರೂ. ಹುಂಡಿ ಹಣ ಸಂಗ್ರಹವಾಗಿದೆ.
ಚಾಮುಂಡಿ ಬೆಟ್ಟದಲ್ಲಿ ನಿರ್ಬಂಧ ಸಡಿಲಿಕೆ ಹಿನ್ನೆಲೆ: 38 ದಿನದಲ್ಲಿ 1.14 ಕೋಟಿ ರೂ. ಸಂಗ್ರಹ! - Chamundi Temple Lock bt Corona pandemic
ಕೊರೊನಾ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ವಿಧಿಸಿದ್ದ ನಿರ್ಬಂಧಗಳನ್ನು ತೆರವುಗೊಳಿಸಲಾಗಿದ್ದು, ಭಕ್ತರ ಆಗಮನದ ಸಂಖ್ಯೆ ಹೆಚ್ಚಾಗಿದೆ. 38 ದಿನಗಳಲ್ಲಿ 1.14 ಕೋಟಿ ರೂ. ಹುಂಡಿ ಹಣ ಸಂಗ್ರಹವಾಗಿದೆ.
ಚಾಮುಂಡಿ ಬೆಟ್ಟ
ಕೊರೊನಾ ತೀವ್ರವಾಗಿದ್ದ ಸಮಯದಲ್ಲಿ ಲಾಕ್ಡೌನ್ ಘೋಷಣೆ ಮಾಡಿ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಇದೀಗ ಪರಿಸ್ಥಿತಿ ಹತೋಟಿಗೆ ಬರುತ್ತಿದ್ದು, ನವೆಂಬರ್ನಲ್ಲಿ ದೇವಾಲಯಗಳಿಗೆ ಹಾಕಿದ್ದ ಕೆಲವು ನಿರ್ಬಂಧಗಳನ್ನು ರದ್ದುಗೊಳಿಸಲಾಗಿದೆ.
ಹಾಗಾಗಿ 38 ದಿನಗಳಲ್ಲಿ 1,14,18,628 ರೂ. ಹುಂಡಿ ಹಣ ಸಂಗ್ರಹವಾಗಿದೆ. ಜೊತೆಗೆ ಕೆಲ ಭಕ್ತರು ಹರಕೆ ರೂಪದಲ್ಲಿ ಚಿನ್ನಾಭರಣವನ್ನು ಸಹ ಹುಂಡಿಗೆ ಹಾಕಿದ್ದಾರೆ ಎಂದು ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಯತಿರಾಜ್ ತಿಳಿಸಿದ್ದಾರೆ.