ಕರ್ನಾಟಕ

karnataka

ETV Bharat / city

ಕೊರೊನಾ ಅಬ್ಬರದ ನಡುವೆಯೂ ಕೋಟಿಗೂ ಅಧಿಕ ರೂಪಾಯಿ ಕಾಣಿಕೆ ಪಡೆದ ಚಾಮುಂಡೇಶ್ವರಿ - ನಾಡ ಅಧಿದೇವತೆ ಚಾಮುಂಡೇಶ್ವರಿ

ಮಾರ್ಚ್​ ತಿಂಗಳಿನ ಹುಂಡಿ ಎಣಿಕೆ ಕಾರ್ಯ ಮುಗಿದಿದ್ದು, 3,27,320 ರೂ. ನಾಣ್ಯಗಳು ಸೇರಿದಂತೆ 1,68,66,208 ರೂ. ಸಂಗ್ರಹವಾಗಿದೆ.

Chamundeswari temple
Chamundeswari temple

By

Published : Apr 11, 2021, 4:48 PM IST

ಮೈಸೂರು: ಕೊರೊನಾ ಅಬ್ಬರದ ನಡುವೆ ನಾಡ ಅಧಿದೇವತೆ ಚಾಮುಂಡೇಶ್ವರಿ ಭಕ್ತರು ಕಾಣಿಕೆ ಅರ್ಪಿಸಿ‌ ಭಕ್ತಿ ಮರೆದಿದ್ದಾರೆ.

ಮಾರ್ಚ್​ ತಿಂಗಳಿನ ಹುಂಡಿ ಎಣಿಕೆ ಕಾರ್ಯ ಮುಗಿದಿದ್ದು, 3,27,320 ರೂ. ನಾಣ್ಯಗಳು ಸೇರಿದಂತೆ 1,68,66,208 ರೂ. ಸಂಗ್ರಹವಾಗಿದೆ.

2 ಸಾವಿರ ಮುಖಬೆಲೆಯ 308 ನೋಟುಗಳಿಂದ 6.16 ಲಕ್ಷ ರೂ‌., 500 ಮುಖಬೆಲೆಯ 11647 ನೋಟುಗಳಿಂದ 58,23,500 ರೂ., 200 ರೂ. ಮುಖಬೆಲೆ 4393 ನೋಟುಗಳಿಂದ 8,78,600 ರೂ., 100 ರೂ. ಮುಖಬೆಲೆಯ 56414 ನೋಟುಗಳಿಂದ 56,41,400 ರೂ., 50 ರೂ. ಮುಖಬೆಲೆಯ 32,751 ನೋಟುಗಳಿಂದ 16,37,550 ರೂ., 20 ರೂ. ಮುಖಬೆಲೆಯ 34,151 ನೋಟುಗಳಿಂದ 6,83,020 ರೂ., 10 ರೂ. ಮುಖಬೆಲೆಯ 1,25,377 ನೋಟುಗಳಿಂದ 12,53,770 ರೂ., 5 ರೂ. ಮುಖಬೆಲೆ 990 ನಾಣ್ಯಗಳಿಂದ 4950 ರೂ., 2 ರೂ. ಮುಖಬೆಲೆಯ 8 ನಾಣ್ಯಗಳಿಂದ 16 ರೂ., 1 ರೂ. ಮುಖಬೆಲೆಯ 82 ನಾಣ್ಯಗಳಿಂದ 82 ರೂ.ಗಳಿಂದ ಒಟ್ಟಾರೆ 1,65,38,888 ರೂ. ಸಂಗ್ರಹವಾಗಿದೆ.

ABOUT THE AUTHOR

...view details