ಕರ್ನಾಟಕ

karnataka

ETV Bharat / city

ಕಾರು - ಬೈಕ್ ಡಿಕ್ಕಿ: ಮೈಸೂರಲ್ಲಿ ಸಹೋದರರಿಬ್ಬರ ದಾರುಣ ಸಾವು - ಕಾರು ಮತ್ತು ಬೈಕ್ ನಡುವೆ ಡಿಕ್ಕಿ

ಅಪಘಾತದಲ್ಲಿ (Accident)ಸಹೋದರರಿಬ್ಬರು ಮೃತಪಟ್ಟ ಘಟನೆ ಮೈಸೂರಿನ ಇಲವಾಲ ಸಮೀಪದ ಹೊಸರಾಮನಹಳ್ಳಿ ಸೇತುವೆ ಬಳಿ ನಡೆದಿದೆ.

Mysore
ಕಾರು-ಬೈಕ್ ಡಿಕ್ಕಿ

By

Published : Nov 22, 2021, 11:45 AM IST

ಮೈಸೂರು: ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ, ಸಹೋದರರಿಬ್ಬರು ಮೃತಪಟ್ಟಿರುವ ದಾರುಣ ಘಟನೆ ಇಲವಾಲ ಸಮೀಪದ ಹೊಸರಾಮನಹಳ್ಳಿ ಸೇತುವೆ ಬಳಿ ಭಾನುವಾರ ತಡರಾತ್ರಿ ನಡೆದಿದೆ.

ಕಾರು-ಬೈಕ್ ಡಿಕ್ಕಿ: ಮೈಸೂರಿನಲ್ಲಿ ಸಹೋದರರಿಬ್ಬರ ದಾರುಣ ಸಾವು

ಹೊಸಕೋಟೆ ಗ್ರಾಮದ ವಿಶ್ವ (21) ಮತ್ತು ವಿಷ್ಣು(19) ಮೃತ ಸಹೋದರರು ಎಂದು ಗುರುತಿಸಲಾಗಿದೆ. ಹೊಸಕೋಟೆಯಿಂದ ಬೈಕ್ ಮೂಲಕ ಕೆ.ಆರ್.ನಗರಕ್ಕೆ ತೆರಳುತ್ತಿದ್ದ ವೇಳೆ ಎದುರಿಗೆ ಬರುತ್ತಿದ್ದ ಕಾರು ಬೈಕ್​​ಗೆ ಗುದ್ದಿದೆ‌. ಗುದ್ದಿದ ರಭಸಕ್ಕೆ ಓರ್ವ ಕೆರೆಗೆ ಬಿದ್ದಿದ್ದು, ಮತ್ತೊರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸದ್ಯ ಕಾವೇರಿ ಹಿನ್ನೀರಿನಲ್ಲಿ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಮೃತ ದೇಹ ಶೋಧಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:Watch - ಕ್ರಿಸ್‌ಮಸ್ ಮೆರವಣಿಗೆಯಲ್ಲಿದ್ದ ಜನರ ಮೇಲೆ ಹರಿದ ಕಾರು.. 20 ಮಂದಿಗೆ ತೀವ್ರ ಗಾಯ, ಕೆಲವರ ಸಾವು

ABOUT THE AUTHOR

...view details