ಮೈಸೂರು: ಬೈಕ್ ಸವಾರನ ಸಮಯ ಪ್ರಜ್ಞೆಯಿಂದ ಕ್ಯಾಂಟರ್ ಚಾಲಕನೊರ್ವ ನಾಗರಹಾವಿನಿಂದ ಪಾರಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಮೈಸೂರಿನಲ್ಲಿ ಕ್ಯಾಂಟರ್ ಏರಿದ 'ನಾಗರಾಜ'.. ಹಾವಿನಿಂದ ಚಾಲಕ ಪಾರಾಗಿದ್ದು ಹೇಗೆ? - ಮೈಸೂರು ಜಿಲ್ಲಾ ಸುದ್ದಿ
ಬೈಕ್ ಸವಾರನ ಸಮಯ ಪ್ರಜ್ಞೆಯಿಂದ ಕ್ಯಾಂಟರ್ ಚಾಲಕನೊರ್ವ ನಾಗರಹಾವಿನಿಂದ ಪಾರಾಗಿರುವ ಘಟನೆ ಮೈಸೂರಿನ ವಿಜಯನಗರ-ಬೋಗಾದಿ ರಸ್ತೆಯಲ್ಲಿ ನಡೆದಿದೆ.
![ಮೈಸೂರಿನಲ್ಲಿ ಕ್ಯಾಂಟರ್ ಏರಿದ 'ನಾಗರಾಜ'.. ಹಾವಿನಿಂದ ಚಾಲಕ ಪಾರಾಗಿದ್ದು ಹೇಗೆ? canter driver safe from snake in mysore](https://etvbharatimages.akamaized.net/etvbharat/prod-images/768-512-12947587-thumbnail-3x2-mys.jpg)
ಮೈಸೂರಿನಲ್ಲಿ ನಾಗರಹಾವಿನಿಂದ ಪಾರಾದ ಕ್ಯಾಂಟರ್ ಚಾಲಕ!
ನಗರದ ವಿಜಯನಗರ-ಬೋಗಾದಿ ರಸ್ತೆಯಲ್ಲಿ ಬುಧವಾರ ರಾತ್ರಿ ಚಾಲಕ ಕ್ಯಾಂಟರ್ ಓಡಿಸಿಕೊಂಡು ಹೋಗುತ್ತಿದ್ದ. ಕ್ಯಾಂಟರ್‌ನ ಗ್ಲಾಸ್ ಮೇಲೆ ಹಾವು ಇರುವುದನ್ನು ಗಮನಿಸಿರಲಿಲ್ಲ. ಹಿಂದೆಯಿಂದ ಬಂದ ಬೈಕ್ ಸವಾರನೋರ್ವ ಗ್ಲಾಸ್ ಮೇಲೆ ಹಾವು ಇದ್ದು, ನೋಡುವಂತೆ ಸೂಚಿಸಿದ್ದಾನೆ. ಕೂಡಲೇ ತನ್ನ ವಾಹನವನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿದ ಚಾಲಕ ಸ್ನೇಕ್ ಸೂರ್ಯ ಕೀರ್ತಿಗೆ ಕರೆ ಮಾಡಿದ್ದಾನೆ.
ಸ್ಥಳಕ್ಕಾಗಮಿಸಿದ ಸ್ನೇಕ್ ಸೂರ್ಯ ಕೀರ್ತಿ, ಕ್ಯಾಂಟರ್‌ನ ಕ್ಯಾಬಿನ್‌ನಲ್ಲಿ ಗಾಯಗೊಂಡು ನರಳಾಡುತ್ತಿದ್ದ ನಾಗರಹಾವನ್ನು ರಕ್ಷಣೆ ಮಾಡಿದ್ದಾರೆ.