ಮೈಸೂರು: ಎರಡು ತಲೆ, ಮೂರು ಕಣ್ಣುಗಳಿರುವ ವಿಚಿತ್ರ ಕರುವೊಂದು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಹೊಮ್ಮರಗಳ್ಳಿ ಗ್ರಾಮದಲ್ಲಿ ಜನಿಸಿದ್ದು, ಕರು ನೋಡಲು ಜನರು ಮುಗಿ ಬೀಳುತ್ತಿದ್ದಾರೆ.
ಹೊಮ್ಮರಗಳ್ಳಿ ನಿವಾಸಿ ಮಹದೇವಪ್ಪ ಅವರ ಮನೆಯ ಸೀಮೆ ಹಸು ಈ ವಿಚಿತ್ರ ಕರುವಿಗೆ ಜನ್ಮ ನೀಡಿದೆ. ಎರಡು ತಲೆ, ಮೂರು ಕಣ್ಣನ್ನು ಈ ಕರು ಹೊಂದಿದ್ದು, ಈ ಅದ್ಭುತವನ್ನು ನೋಡಿದ ಮನೆ ಮಂದಿ ಸಂತಸಗೊಂಡಿದ್ದಾರೆ.
ಎರಡು ತಲೆ, ಮೂರು ಕಣ್ಣುಗಳುಳ್ಳ ಕರು ಇದನ್ನೂ ಓದಿ:ನೀವು ಧೂಮಪಾನ ವ್ಯಸನಿಗಳೇ?.. ಇಲ್ಲಿದೆ ನೋಡಿ ಆಯುರ್ವೇದಿಕ್ ಸಿಗರೇಟ್
ಈ ಕುರಿತು 'ಈಟಿವಿ ಭಾರತ'ದ ಜೊತೆ ದೂರವಾಣಿಯಲ್ಲಿ ಮಾತನಾಡಿದ ಮಹದೇವಪ್ಪ, ಹಸುವಿಗೆ ಇದು ಮೂರನೇ ಕರುವಾಗಿದ್ದು, ಮೊದಲೆರಡು ಕರುಗಳು ಸಹಜವಾಗಿಯೇ ಜನಿಸಿವೆ. ಮೂರನೇ ಕರುವಾದ ಇದು ಮಾತ್ರ ವಿಶೇಷವಾಗಿದೆ. ಎರಡು ತಲೆಗಳ ನಡುವೆ ಒಂದು ಕಣ್ಣಿದ್ದು, ಒಟ್ಟು ಮೂರು ಕಣ್ಣುಗಳನ್ನು ಹೊಂದಿದೆ. ಹಸು ಹಾಗೂ ಕರು ಆರೋಗ್ಯವಾಗಿದ್ದು, ಹಾಲು ಸಹ ಕುಡಿಯುತ್ತಿದೆ ಎಂದರು.
ಎರಡು ತಲೆ, ಮೂರು ಕಣ್ಣುಗಳುಳ್ಳ ಕರು ಇದನ್ನೂ ಓದಿ:ತಮಿಳುನಾಡಿನಲ್ಲಿ ಮುಂದುವರಿದ ವರುಣಾರ್ಭಟ: ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ
ಈ ವಿಚಿತ್ರ ಹಾಗೂ ವಿಶೇಷ ಕರು ನೋಡಲು ಸುತ್ತಮುತ್ತಲಿನ ಗ್ರಾಮದ ಜನರು ಆಗಮಿಸುತ್ತಿದ್ದು, ಕರು ನೋಡಿದ ಮಂದಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.