ಮೈಸೂರು:ಸಿಎಂ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ನಗರದ ಹೂಟಗಳ್ಳಿಯನ್ನು ನಗರಸಭೆಯನ್ನಾಗಿ ಜೊತೆಗೆ 4 ಗ್ರಾಮ ಪಂಚಾಯಯತ್ಗಳನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ.
ಮೈಸೂರು ನಗರದ ಹೊರವಲಯದಲ್ಲಿರುವ ಬೋಗಾದಿ, ಶ್ರೀರಾಂಪುರ, ಕಡಕೋಳ, ರಮ್ಮನಹಳ್ಳಿ ಗ್ರಾಮ ಪಂಚಾಯತಿಗಳನ್ನು ಪಟ್ಟಣ ಪಂಚಾಯತಿಯಾಗಿ, ಹಿನಕಲ್-ಕೂರ್ಗಳ್ಳಿ- ಬೆಳವಾಡಿ- ಹೂಟಗಳ್ಳಿ ಒಳಗೊಂಡಂತೆ ಒಂದು ನಗರಸಭೆಯನ್ನು ರಚನೆ ಮಾಡಲು ಇಂದಿನ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡಿದ್ದು, ಇದಕ್ಕೆ ಈ ಭಾಗದ ಬಹುದದಿನದ ಬೇಡಿಕೆ ಈಡೇರಿಸಿದಂತಾಗಿದೆ.