ಕರ್ನಾಟಕ

karnataka

ETV Bharat / city

ಮೈಸೂರಲ್ಲೂ ನೀತಿ ಸಂಹಿತೆ ಜಾರಿ, ಆದರೆ ದಸರಾಗೆ ತೊಂದರೆ ಇಲ್ಲ: ಜಿಲ್ಲಾಧಿಕಾರಿ - ಹುಣಸೂರು ವಿಧಾನಸಭಾ ಕ್ಷೇತ್ರ

ರಾಜ್ಯದ 12 ಜಿಲ್ಲೆಗಳ 15 ಕ್ಷೇತ್ರಗಳಲ್ಲಿ ಉಪ ಚುನಾವಣೆಯ ದಿನಾಂಕವನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಪ್ರಕಟಿಸಿದ್ದಾರೆ.

by-election-code-of-conduct-to-mysore-district

By

Published : Sep 22, 2019, 3:24 AM IST

ಮೈಸೂರು:ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ಅಕ್ಟೋಬರ್​ 21ರಂದು ಉಪ ಚುನಾವಣೆ ನಡೆಯಲಿರುವ ಕಾರಣ ಜಿಲ್ಲಾದ್ಯಂತ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀತಿ ಸಂಹಿತೆಯಿಂದ ದಸರಾಗೆ ಯಾವುದೇ ತೊಂದರೆ ಆಗುವುದಿಲ್ಲ. ಅದಕ್ಕೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗುವುದು. ಆಯೋಗ ನೀಡುವ ಸಲಹೆ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ...ಉಪಸಮರಕ್ಕೆ ಮುಹೂರ್ತ ಫಿಕ್ಸ್‌: ಇಲ್ಲಿದೆ ಚುನಾವಣಾ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ

ಹುಣಸೂರು ವಿಭಾಗಾಧಿಕಾರಿಗಳು ಅಧಿಕಾರಿ ಹಾಗೂ ಸಹಾಯಕ ಅಧಿಕಾರಿಯಾಗಿ ತಹಸೀಲ್ದಾರ್ ಕೆಲಸ ಮಾಡಲಿದ್ದಾರೆ. ನಾಮಪತ್ರ ಸಲ್ಲಿಕೆ ಹಾಗೂ ಫಲಿತಾಂಶ ಹುಣಸೂರಿನಲ್ಲಿಯೇ ನಡೆಯಲಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್

274 ಮತಗಟ್ಟೆಗಳಿದ್ದು, 1,14,146 ಪುರುಷರು, 1,12,770 ಮಹಿಳೆಯರು, 4 ಇತರೆ ಸೇರಿದಂತೆ ಒಟ್ಟು 2,26,920 ಮತದಾರರಿದ್ದಾರೆ ಎಂದರು.

ABOUT THE AUTHOR

...view details