ಮೈಸೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಹಾಗೂ ನೀವು (ಮಾಧ್ಯಮದವರು) ಕುಳಿತುಕೊಂಡು ಡಿಸೈಡ್ ಮಾಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅವರು ಲೇವಡಿ ಮಾಡಿದರು.
ಸಿಎಂ ಬದಲಾವಣೆ ವಿಚಾರ: ಸಿದ್ದರಾಮಯ್ಯ, ನೀವು ಕುಳಿತುಕೊಂಡು ಡಿಸೈಡ್ ಮಾಡಿ ಎಂದ ಬಿಎಸ್ವೈ - B.S.Yadiyurappa reaction about cabinet expansion
ಜನವರಿ 13 ಮತ್ತು 14 ರಂದು ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಅಂದು ಸಂಪುಟ ವಿಸ್ತರಣೆಯಾಗಲಿದೆಯೋ ಅಥವಾ ಪುನರ್ ರಚನೆಯಾಗಲಿದೆಯೋ ಎಂದು ನಿಮಗೆ ಗೊತ್ತಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
![ಸಿಎಂ ಬದಲಾವಣೆ ವಿಚಾರ: ಸಿದ್ದರಾಮಯ್ಯ, ನೀವು ಕುಳಿತುಕೊಂಡು ಡಿಸೈಡ್ ಮಾಡಿ ಎಂದ ಬಿಎಸ್ವೈ ಬಿ.ಎಸ್.ಯಡಿಯೂರಪ್ಪ](https://etvbharatimages.akamaized.net/etvbharat/prod-images/768-512-10197219-thumbnail-3x2-lek.jpg)
ಬಿ.ಎಸ್.ಯಡಿಯೂರಪ್ಪ
ಸುತ್ತೂರಿನ ಹೆಲಿಪ್ಯಾಡ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್ವೈ
ಸುತ್ತೂರಿನ ಹೆಲಿಪ್ಯಾಡ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನವರಿ 13 ಮತ್ತು 14 ರಂದು ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಅಂದು ಸಂಪುಟ ವಿಸ್ತರಣೆಯಾಗಲಿದೆಯೋ ಅಥವಾ ಪುನರ್ ರಚನೆಯಾಗಲಿದೆಯೋ ಎಂದು ನಿಮಗೇ ಗೊತ್ತಾಗಲಿದೆ ಎಂದರು.
ಕೋವಿಡ್-19 ನಂತರ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಈ ಹಿನ್ನೆಲೆಯಲ್ಲಿ ಜನಪರ, ಅಭಿವೃದ್ಧಿ ಬಜೆಟ್ ನೀಡಲಿದ್ದೇವೆ. ಮಾರ್ಚ್ ವೇಳೆಗೆ ಬಜೆಟ್ ತಯಾರಿ ಪೂರ್ಣಗೊಳ್ಳಲಿದ್ದು, ಉತ್ತಮ ಬಜೆಟ್ ಮಂಡಿಸುವ ವಿಶ್ವಾಸವಿದೆ ಎಂದು ಇದೇ ವೇಳೆ ತಿಳಿಸಿದರು.
Last Updated : Jan 11, 2021, 11:56 AM IST