ಕರ್ನಾಟಕ

karnataka

ETV Bharat / city

ದೇವಸ್ಥಾನ ಒಡೆಯುವ ಮುನ್ನ ರಸ್ತೆಯಲ್ಲಿರುವ ದರ್ಗಾ ಒಡೆಯಿರಿ.. ಸಂಸದ ಪ್ರತಾಪ ಸಿಂಹ - temple demolition on mysore

ಅನಧಿಕೃತವಾಗಿ ರಸ್ತೆ ಮಧ್ಯೆ ದೇವಸ್ಥಾನ, ಚರ್ಚ್​,ಮಸೀದಿ ಯಾವುದೇ ಇದ್ದರೂ ಅದನ್ನು ಮೂರು ಧರ್ಮಗಳ ಜನರ ಜೊತೆ ಚರ್ಚಿಸಿ, ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆ ನಂತರ ಒಡೆಯಿರಿ..

Break down dargah before the temple breaks down says mp pratap simha
ಸಂಸದ ಪ್ರತಾಪ ಸಿಂಹ ಹೇಳಿಕೆ

By

Published : Sep 8, 2021, 8:22 PM IST

ಮೈಸೂರು :ರಸ್ತೆಯಲ್ಲಿ ಅಧಿಕೃತವಾಗಿರುವ ದೇವಸ್ಥಾನಗಳನ್ನು ಒಡೆಯುವ ಮುನ್ನ ದರ್ಗಾಗಳನ್ನು ಒಡೆಯಿರಿ ಎಂದು ಸಂಸದ ಪ್ರತಾಪಸಿಂಹ ಹೇಳಿದ್ರು.

ಮಂದಿರ,ಮಸೀದಿ ಹಾಗೂ ಚರ್ಚ್‌ಗಳನ್ನ ಒಡೆದು ಹಾಕುವ ಮುನ್ನ.. ಹೀಗೆ ಮಾಡಿ ಅಂತಾರೆ ಸಂಸದರು

ಜಿಲ್ಲಾ ಪಂಚಾಯತ್ ಸಭಾಂಗಣದ ಮುಂಭಾಗ ಮಾತನಾಡಿದ ಅವರು, ರಾತ್ರೋರಾತ್ರಿ ದೇವಸ್ಥಾನಗಳನ್ನು ಒಡೆಯುವ ಮುನ್ನ, ದೇವರಾಜ ಅರಸು ರಸ್ತೆಯಲ್ಲಿರುವ ದರ್ಗಾ ಒಡೆಯಿರಿ. ಇರ್ವಿನ್ ರಸ್ತೆಯಲ್ಲಿರುವ ಮಸೀದಿಯನ್ನ ಒಡೆದು ರಸ್ತೆ ಅಗಲೀಕರಣಕ್ಕೆ ಅನುಕೂಲ‌ ಮಾಡಿಕೊಡಬೇಕು ಎಂದ್ರು.

ಅನಧಿಕೃತವಾಗಿ ರಸ್ತೆ ಮಧ್ಯೆ ದೇವಸ್ಥಾನ, ಚರ್ಚ್​,ಮಸೀದಿ ಯಾವುದೇ ಇದ್ದರೂ ಅದನ್ನು ಮೂರು ಧರ್ಮಗಳ ಜನರ ಜೊತೆ ಚರ್ಚಿಸಿ, ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆ ನಂತರ ಒಡೆಯಿರಿ. ಆದರೆ, ಹಿಂದು ದೇವಸ್ಥಾನಗಳ ಮೇಲೆ ಯಾಕೆ ಕಣ್ಣು ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ತೆಲಂಗಾಣದಲ್ಲೂ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ: ತೇಜಸ್ವಿ ಸೂರ್ಯ

ABOUT THE AUTHOR

...view details