ಕರ್ನಾಟಕ

karnataka

ETV Bharat / city

ನಮ್ಮ ದೇಶದಲ್ಲಿ ಗೋಮಾಂಸ ರಫ್ತು ಮಾಡುವವರಲ್ಲಿ ಬ್ರಾಹ್ಮಣರೇ ಹೆಚ್ಚು.. ಪ್ರೊ. ಕೆ ಎಸ್ ಭಗವಾನ್ - ಗೋಹತ್ಯೆ ನಿಷೇಧ ಕಾಯ್ದೆ

ಪಂಚಾಂಗ, ಜ್ಯೋತಿಷ್ಯ, ದೇವರು ಎಂಬುದೆಲ್ಲಾ ಕೇವಲ ಮೌಢ್ಯ ಹಾಗೂ ಕಂದಾಚಾರ. ಕೊರೊನಾ ಬರುತ್ತದೆ ಎಂದು ಯಾವ ಪಂಚಾಂಗ, ಯಾವ ಜ್ಯೋತಿಷಿಯೂ ಹೇಳಲಿಲ್ಲ. ಕೊರೊನಾದಿಂದ ಜನರನ್ನು ರಕ್ಷಿಸಲು ಯಾವ ದೇವರೂ ಬರಲಿಲ್ಲ, ದೇವಾಲಯ, ಚರ್ಚ್, ಮಸೀದಿಗಳ ಬಾಗಿಲು ಬಂದ್ ಮಾಡಲಾಯಿತು. ಇಷ್ಟಾದ್ರೂ ಯಾವುದೇ ದೇವರು ಮಾರಕ ವೈರಸ್‌ನಿಂದ ಜನರನ್ನು ರಕ್ಷಿಸಲು ಬರಲಿಲ್ಲ..

brahmins-are-more-in-exporting-beef-in-our-country
ಕೆಎಸ್ ಭಗವಾನ್

By

Published : Dec 15, 2020, 8:00 PM IST

Updated : Dec 15, 2020, 8:14 PM IST

ಮೈಸೂರು :ನಮ್ಮ‌ ದೇಶದಲ್ಲಿ ಗೋಮಾಂಸ ರಫ್ತು ಮಾಡುವವರಲ್ಲಿ ಮೇಲ್ವರ್ಗದ ಬ್ರಾಹ್ಮಣರೇ ಹೆಚ್ಚಾಗಿದ್ದಾರೆ. ರಾಜ್ಯದಲ್ಲಿ ಯಾವುದೇ ಚರ್ಚೆಯನ್ನು ನಡೆಸದೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಸಾಹಿತಿ ಪ್ರೊ. ಕೆ ಎಸ್ ಭಗವಾನ್ ಹೇಳಿಕೆ ನೀಡಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಗೋಮಾಂಸವನ್ನು ಬ್ರಾಹ್ಮಣರೇ ಹೆಚ್ಚಾಗಿ ತಿನ್ನುತ್ತಿದ್ದರು ಎಂಬುದು ಗ್ರಂಥಗಳಲ್ಲೇ ಉಲ್ಲೇಖವಿದೆ. ಜೊತೆಗೆ ಬೇರೆ ದೇಶಗಳಿಗೆ ಗೋಮಾಂಸವನ್ನು ರಫ್ತು ಮಾಡುವುದರಲ್ಲಿ ಬ್ರಾಹ್ಮಣರೇ ಹೆಚ್ಚು. ಇಂತಹ ಸಂದರ್ಭದಲ್ಲಿ ಯಾವುದೇ ಚರ್ಚೆ ನಡೆಸದೆ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡುವುದು ಸರಿಯಲ್ಲ ಎಂದು ಹೇಳಿದರು.

ರೈತರು ಅಶಕ್ತ ಜಾನುವಾರುಗಳನ್ನು ಮಾತ್ರ ಮಾರಾಟ ಮಾಡುತ್ತಾರೆ. ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಿಂದ ರೈತರು ಅಶಕ್ತ ಜಾನುವಾರುಗಳನ್ನು ಸಾಕಬೇಕಾಗುತ್ತದೆ. ಇದರಿಂದ ರೈತರಿಗೆ ಹೊರೆಯಾಗಿ ಪರಿಣಮಿಸುತ್ತದೆ. ರೈತರು ತಮ್ಮ ಜಾನುವಾರುಗಳೊಂದಿಗೆ ಯಾವುದೇ ರೀತಿಯ ಭಾವುಕತೆ ಇಟ್ಟುಕೊಂಡಿರುವುದಿಲ್ಲ.

ಗೋಹತ್ಯೆ ನಿಷೇಧ ಕಾಯ್ದೆ ಕುರಿತು ಪ್ರೊ. ಕೆ ಎಸ್ ಭಗವಾನ್​ ಪ್ರತಿಕ್ರಿಯೆ..

ಅಮೆರಿಕಾದಲ್ಲಿ ಕೊಲ್ಲಲೆಂದೇ ದನಗಳನ್ನು ಸಾಕುತ್ತಾರೆ. ಇಂತಹದರಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿರುವುದು ಸರಿಯಾದ ಕ್ರಮವಲ್ಲ. ಈ ವಿಚಾರದಲ್ಲಿ ಮೊದಲಿನ ನಿಯಮ, ಪದ್ಧತಿಯೇ ಮುಂದುವರಿಯಬೇಕು ಎಂದರು.

ಭೋಪಾಲ್ ಸಂಸದೆ ಹೇಳಿಕೆಗೆ ತಿರುಗೇಟು :ಬ್ರಾಹ್ಮಣರನ್ನು ಬ್ರಾಹ್ಮಣರೆಂದ್ರೆ, ಕ್ಷತ್ರಿಯರನ್ನು ಕ್ಷತ್ರಿಯರೆಂದ್ರೆ, ವೈಶ್ಯರನ್ನು ವೈಶರೆಂದ್ರೆ ಸಂತಸಪಡುವಂತೆ ಶೂದ್ರರನ್ನು ಶೂದ್ರರೆಂದ್ರೆ ಸಂತಸಪಡಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಭೋಪಾಲ್​ನ ಸಂಸದೆ ಪ್ರಜ್ಞಾ ಠಾಕೂರ್ ವಿರುದ್ದ ವಾಗ್ದಾಳಿ ನಡೆಸಿದ ಅವರು, ಪ್ರಜ್ಞಾ ಠಾಕೂರ್​ಗೆ ಹಿಂದೂ ಧರ್ಮದ ಬಗ್ಗೆಯೇ ಸಂಪೂರ್ಣ ಅರಿವಿಲ್ಲ.

ಹಿಂದೂ ಧರ್ಮವೆಂದ್ರೆ ಕೇವಲ ಬ್ರಾಹ್ಮಣರ ಧರ್ಮವೇ ಹೊರತು, ಬೇರೆಯವರ ಧರ್ಮವಲ್ಲ. ಶೂದ್ರರೆಂದ್ರೆ ಬ್ರಾಹ್ಮಣರ ಗುಲಾಮರು. ಶೂದ್ರರೆಂದ್ರೆ ಸೂಳೆಯ ಮಗ ಅಥವಾ ಹಾದರಕ್ಕೆ ಹುಟ್ಟಿದವ ಎಂದು ಮನುಸ್ಮೃತಿಯಲ್ಲಿ ಉಲ್ಲೇಖವಾಗಿದೆ. ಇಂತಹ ಪದವನ್ನು ಶೂದ್ರ ಜನಾಂಗ ಒಪ್ಪಿಕೊಳ್ಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಓದಿ-ಪರಿಷತ್ ದಾಂಧಲೆಯಲ್ಲಿ ಡಿಸಿಎಂಗಳು, ಹಿರಿಯ ಸಚಿವರು ಮೂಕ ಪ್ರೇಕ್ಷಕರು.. ಸದನಕ್ಕೂ ಮೊದಲೇ ಗುಂಪು ಸೇರಿದ್ಯಾಕೆ?

ಪಂಚಾಂಗ, ಜ್ಯೋತಿಷ್ಯ ಮತ್ತು ದೇವರು ಎಂಬುದೆಲ್ಲಾ ಮೌಢ್ಯ, ಕಂದಾಚಾರ :ಪಂಚಾಂಗ, ಜ್ಯೋತಿಷ್ಯ, ದೇವರು ಎಂಬುದೆಲ್ಲಾ ಕೇವಲ ಮೌಢ್ಯ ಹಾಗೂ ಕಂದಾಚಾರ. ಕೊರೊನಾ ಬರುತ್ತದೆ ಎಂದು ಯಾವ ಪಂಚಾಂಗವೂ ಹೇಳಲಿಲ್ಲ. ಯಾವ ಜ್ಯೋತಿಷಿಯೂ ಕೊರೊನಾ ಬರುತ್ತದೆಂದು ಹೇಳಲಿಲ್ಲ.

ಕೊರೋನಾದಿಂದ ಜನರನ್ನು ರಕ್ಷಿಸಲು ಯಾವ ದೇವರು ಬರಲಿಲ್ಲ. ಕೋವಿಡ್​​ ಬರುತ್ತಿದ್ದಂತೆ ದೇವಾಲಯ ಚರ್ಚ್, ಮಸೀದಿಗಳ ಬಾಗಿಲು ಬಂದ್ ಮಾಡಲಾಯಿತು. ಇಷ್ಟಾದ್ರೂ ಯಾವುದೇ ದೇವರು ಮಾರಕ ವೈರಸ್‌ನಿಂದ ಜನರನ್ನು ರಕ್ಷಣೆ ಮಾಡಲು ಬರಲಿಲ್ಲ ಎಂದರು.

ಪಕ್ಷಗಳು ತಮಗೆ ತಕ್ಕಂತೆ ಪರಿಷತ್​ನನ್ನು ಬಳಸಿಕೊಳ್ಳುತ್ತಿವೆ :ವಿಧಾನ ಪರಿಷತ್​ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ‌ಸದಸ್ಯರಿಂದಾದ ಗದ್ದಲ ಕುರಿತಂತೆ ಪ್ರತಿಕ್ರಿಯಿಸಿರುವ ಭಗವಾನ್ ಅವರು, ಮೇಲ್ಮನೆ ಅಂದ್ರೆ ಚಿಂತಕರ ಚಾವಡಿ ಎನ್ನಲಾಗುತ್ತಿತ್ತು. ಸಮಾಜದ ವಿವಿಧ ವಲಯಗಳ ಅನುಭವಿಗಳು ಅಲ್ಲಿರುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ವಿಧಾನ ಪರಿಷತ್ತನ್ನು ಬಳಸಿಕೊಳ್ಳುತ್ತಿವೆ.

ತಮ್ಮ ಪಕ್ಷದವರನ್ನು ಆಯ್ಕೆ ಮಾಡಿಕೊಳ್ಳಲು ವಿಧಾನ ಪರಿಷತ್ತನ್ನು ಬಳಸಿಕೊಳ್ಳುತ್ತಿವೆ. ಇದರ ಪರಿಣಾಮ ವಿಧಾನ ಪರಿಷತ್​ನ ಮೂಲ ಉದ್ದೇಶವೇ ಹಾಳಾಗಿ ಹೋಗಿದೆ. ಈ ಬಗ್ಗೆ ಇನ್ನು ಮುಂದಾದ್ರೂ ರಾಜಕೀಯ ಪಕ್ಷಗಳು ಚಿಂತನೆ ನಡೆಸುವ ಅವಶ್ಯಕತೆ ಇದೆ ಎಂದು ಸಾಹಿತಿ ಪ್ರೊ. ಕೆ ಎಸ್ ಭಗವಾನ್ ತಿಳಿಸಿದರು.

Last Updated : Dec 15, 2020, 8:14 PM IST

ABOUT THE AUTHOR

...view details