ಮೈಸೂರು:ವೈಲ್ಡ್ ಲೈಫ್ ಫೋಟೋಗ್ರಾಫರ್ ಹೆಚ್.ಮಿಥುನ್ ಆರು ದಿನ ಒಂದೇ ಕಡೆ ಕಾದು ಸೆರೆ ಹಿಡಿದಿರುವ ಬ್ಲಾಕ್ ಪ್ಯಾಂಥರ್ಸ್ ಹಾಗೂ ಚಿರತೆ ಸಮಾಗಮದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಬ್ಲಾಕ್ ಪ್ಯಾಂಥರ್ಸ್, ಚಿರತೆ ಸಮಾಗಮ... ಒಂದೇ ಕಡೆ 6 ದಿನ ಕಾದ ಫೋಟೋಗ್ರಾಫರ್! - ನಾಗರಹೊಳೆ ರಾಷ್ಟ್ರೀಯ ಉದ್ಯಾನವನ
ವೈಲ್ಡ್ ಲೈಫ್ ಫೋಟೋಗ್ರಾಫರ್ ಹೆಚ್.ಮಿಥುನ್ ಆರು ದಿನ ಒಂದೇ ಕಡೆ ಕಾದು ಸೆರೆ ಹಿಡಿದಿರುವ ಬ್ಲಾಕ್ ಪ್ಯಾಂಥರ್ಸ್ ಹಾಗೂ ಚಿರತೆ ಸಮಾಗಮದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
![ಬ್ಲಾಕ್ ಪ್ಯಾಂಥರ್ಸ್, ಚಿರತೆ ಸಮಾಗಮ... ಒಂದೇ ಕಡೆ 6 ದಿನ ಕಾದ ಫೋಟೋಗ್ರಾಫರ್! Black Panthers and Leopard Photo is viral](https://etvbharatimages.akamaized.net/etvbharat/prod-images/768-512-8160996-115-8160996-1595607596653.jpg)
ಬ್ಲಾಕ್ ಪ್ಯಾಂಥರ್ಸ್ ಹಾಗೂ ಚಿರತೆ ಸಮಾಗಮಕ್ಕಾಗಿ ಒಂದೇ ಕಡೆ, 6 ದಿನ ಕಾದ ಫೋಟೋಗ್ರಾಫರ್!
ನಾಗರಹೊಳೆ (ರಾಜೀವ್ ಗಾಂಧಿ) ರಾಷ್ಟ್ರೀಯ ಉದ್ಯಾನವನದ ಕಬಿನಿ ಹಿನ್ನೀರಿ ಪ್ರದೇಶದಲ್ಲಿ ಬ್ಲಾಕ್ ಪ್ಯಾಂಥರ್ಸ್ ಹಾಗೂ ಚಿರತೆ ಹೋಗುತ್ತಿರುವ ದೃಶ್ಯವನ್ನು ವೈಲ್ಡ್ ಲೈಫ್ ಫೋಟೋಗ್ರಾಫರ್ ಹೆಚ್.ಮಿಥುನ್ ಅದ್ಭುತವಾಗಿ ಸೆರೆ ಹಿಡಿದಿದ್ದಾರೆ.
ಬೆಳಿಗ್ಗೆಯಿಂದ ಸಂಜೆಯವರೆಗೆ ಕಾದು ಕುಳಿತು ಅದ್ಭುತ ಫೋಟೋ ತೆಗೆದಿದ್ದು, ಕಬಿನಿಯಲ್ಲಿ ಬ್ಲಾಕ್ ಪ್ಯಾಂಥರ್ಸ್ ಹಾಗೂ ಚಿರತೆ ಹೆಜ್ಜೆ ಹಾಕುತ್ತಿರುವ ದೃಶ್ಯ ಸೆರೆ ಹಿಡಿದಿರುವುದು ಮರೆಯಲಾಗದ ಕ್ಷಣವೆಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.