ಮೈಸೂರು: ಜೆಡಿಎಸ್ ಪಕ್ಷ ತೊರೆದು ಬಿಜೆಪಿಗೆ ಮರಳುತ್ತಿರುವ ಸಚಿವ ಜಿ.ಟಿ. ದೇವೇಗೌಡರವರಿಗೆ ಸ್ವಾಗತ ಎಂದು ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಹಾಕಿದ್ದು, ವೈರಲ್ ಆಗಿರುವುದಲ್ಲದೇ ಚರ್ಚೆಗೆ ಗ್ರಾಸವಾಗಿದೆ.
ಬಿಜೆಪಿಗೆ ಮರಳುತ್ತಿರುವ ಸಚಿವ ಜಿಟಿಡಿಗೆ ಸ್ವಾಗತ: ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ - undefined
ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರು, ಬಿಜೆಪಿಗೆ ಸೇರುತ್ತಿರುವ ಸಚಿವ ಜಿ.ಟಿ. ದೇವೇಗೌಡರವರಿಗೆ ಸ್ವಾಗತ ಎಂದು ಪೋಸ್ಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರು, ಮರಳಿ ಜಿ. ಟಿ.ದೇವೇಗೌಡ ಬಿಜೆಪಿಗೆ, ಅಪ್ಪ ಮಕ್ಕಳ ಪಕ್ಷ ತೊರೆದು ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಯೋಜನೆಗಳನ್ನು ಇಷ್ಟ ಪಟ್ಟು ಬಿಜೆಪಿಗೆ ಸೇರುತ್ತಿರುವ ಸಚಿವ ಜಿ.ಟಿ. ದೇವೇಗೌಡರವರಿಗೆ ಸ್ವಾಗತ ಎಂದು ಪೋಸ್ಟ್ ಮಾಡಿದ್ದಾರೆ.
ಅಲ್ಲದೇ ಅವರ ಪುತ್ರ ಹರೀಶ್ ಗೌಡ ಅವರು ಸಹ ಬಿಜೆಪಿ ಸೇರ್ಪಡೆಯಾಗುತ್ತಿರುವುದಕ್ಕೆ ಸ್ವಾಗತ. ನಿಮ್ಮ ಮಗನಿಗೆ ಹುಣಸೂರಿನಿಂದ ಬಿಜೆಪಿ ಟಿಕೆಟ್, ನಿಮಗೆ ಚಾಮುಂಡೇಶ್ವರಿ ಕ್ಷೇತ್ರದ ಟಿಕೆಟ್ ನೀಡಿ ಮರಳಿ ನಿಮ್ಮನ್ನು ಗೆಲ್ಲಿಸಿ ಕ್ಷೇತ್ರದ ಅಭಿವೃದ್ಧಿ ಮಾಡೋಣ, ಬಿಜೆಪಿಗೆ ಸ್ವಾಗತ ಎಂದು ಬಿಜೆಪಿ ಕಾರ್ಯಕರ್ತರು ಫೇಸ್ಬುಕ್ನಲ್ಲಿ ಹಾಕಿರುವ ಪೋಸ್ಟ್ಗಳು ಚರ್ಚೆಗೆ ಕಾರಣವಾಗಿದೆ.