ಕರ್ನಾಟಕ

karnataka

ETV Bharat / city

ಎಸ್​ಡಿಪಿಐ ಬ್ಯಾನ್ ಮಾಡಬೇಕು ಅನ್ನೋದಾದ್ರೆ ಮೊದಲು ಬಿಜೆಪಿ ಬ್ಯಾನ್ ಮಾಡಿ: ಅಬ್ದುಲ್ ಮಜೀದ್ - ಮೈಸೂರು ಸುದ್ದಿ

ಎಸ್​ಡಿಪಿಐ ಎನ್ನುವುದು 15 ರಾಜ್ಯದಲ್ಲಿರುವ ಒಂದು ರಾಜಕೀಯ ಪಕ್ಷ. ಇದನ್ನು ಏನಾದರು ಬ್ಯಾನ್ ಮಾಡಬೇಕು ಎಂದರೆ ಮೊದಲು ಬಿಜೆಪಿ ಪಕ್ಷವನ್ನು ಬ್ಯಾನ್ ಮಾಡಬೇಕು ಎಂದು ಎಸ್​ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಹೇಳಿದ್ದಾರೆ.

ಎಸ್​ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್

By

Published : Nov 20, 2019, 8:06 PM IST


ಮೈಸೂರು:ಎಸ್​ಡಿಪಿಐ ಎನ್ನುವುದು 15 ರಾಜ್ಯದಲ್ಲಿರುವ ಒಂದು ರಾಜಕೀಯ ಪಕ್ಷ. ಇದನ್ನು ಏನಾದರು ಬ್ಯಾನ್ ಮಾಡಬೇಕು ಎಂದರೆ ಮೊದಲು ಬಿಜೆಪಿ ಪಕ್ಷವನ್ನು ಬ್ಯಾನ್ ಮಾಡಬೇಕು ಎಂದು ಎಸ್​ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಹೇಳಿದ್ದಾರೆ.

ಎಸ್​ಡಿಪಿಐ ಬ್ಯಾನ್ ಮಾಡಬೇಕು ಅನ್ನೋದಾದ್ರೆ ಬಿಜೆಪಿಯನ್ನ ಮೊದಲು ಬ್ಯಾನ್ ಮಾಡಬೇಕು: ಅಬ್ದುಲ್ ಮಜೀದ್

ತನ್ವೀರ್ ಸೇಠ್ ಮೇಲೆ ಹಲ್ಲೆ ಮಾಡಿದ ಆರೋಪಿ ನಮ್ಮ ಪಕ್ಷದ ಕಾರ್ಯಕರ್ತ ಅಲ್ಲ. ಚುನಾವಣಾ ಸಂದರ್ಭದಲ್ಲಿ ಕೆಲಸ ಮಾಡಿದ ಒಬ್ಬ ಯುವಕ ಅಷ್ಟೇ. ಚುನಾವಣಾ ಸಂದರ್ಭದಲ್ಲಿ ಎಲ್ಲಾ ವಾರ್ಡ್​ಗಳಲ್ಲೂ ಗ್ಯಾಂಗ್ ಕಟ್ಟಿಕೊಂಡು ಬಂದು ನಿಮಗೆ ಕೆಲಸ ಮಾಡುತ್ತೇವೆ ಎಂದು ಕೆಲಸ ಮಾಡುತ್ತಾರೆ. ‌ಅದೇ ರೀತಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಕ್ಕೂ ಯುವಕರು ಕೆಲಸ ಮಾಡುತ್ತಾರೆ. ಅದೇ ರೀತಿ ಆರೋಪಿ ಚುನಾವಣಾ ಸಂದರ್ಭದಲ್ಲಿ ನಮ್ಮ ಪರವಾಗಿ ಕೆಲಸ ಮಾಡಿದ್ದಾನೆ ಅಷ್ಟೇ.

ಎಸ್​ಡಿಪಿಐ ಎನ್ನುವುದು 15 ರಾಜ್ಯದಲ್ಲಿರುವ ಒಂದು ರಾಜಕೀಯ ಪಕ್ಷ. ಈ ರೀತಿ ಏನಾದರು ಬ್ಯಾನ್ ಮಾಡಬೇಕು ಎಂದರೆ ಮೊದಲು ಬಿಜೆಪಿ ಪಕ್ಷವನ್ನು ಬ್ಯಾನ್ ಮಾಡಬೇಕು. ಹಿಂಸೆಯಿಂದ ರಾಜಕೀಯ ಮಾಡಿಕೊಂಡು ಅಧಿಕಾರ ಹಿಡಿದಿರುವ ಪಕ್ಷ ಅದು. ಮುಂಬಯಿ ಗಲಾಟೆ, ಗುಜರಾತ್ ಗಲಭೆ, ಶ್ರೀರಾಮನ ಹೆಸರು ಹೇಳಿಕೊಂಡು ಗಲಭೆ ಹಾಗೂ ಹಿಂಸೆ ಮಾಡಿಕೊಂಡು ರಾಜಕೀಯ ಮಾಡುತ್ತಿದೆ. ಬ್ಯಾನ್ ಮಾಡಬೇಕು ಎಂದರೆ ಮೊದಲು ಬಿಜೆಪಿ ಅವರನ್ನು ಬ್ಯಾನ್ ಮಾಡಿ ನಂತರ ಬೇರೆ ಪಕ್ಷಗಳನ್ನು ಬ್ಯಾನ್ ಮಾಡಲು ಮುಂದಾಗಿ ಎಂದಿದ್ದಾರೆ.

ABOUT THE AUTHOR

...view details