ಮೈಸೂರು: ದ್ರಾವಿಡ ನೆಲದಲ್ಲಿ ಬಿಜೆಪಿ ವಿಸ್ತಾರವಾಗಿ ಬೆಳೆಯುತ್ತಿದೆ. ಇದು ಮುಂದಿನ ಚುನಾವಣೆಗೆ ಅನುಕೂಲವಾಗಲಿದೆ ಎಂದು ತಮಿಳುನಾಡು ರಾಜ್ಯ ಉಪಾಧ್ಯಕ್ಷ ಕೆ. ಅಣ್ಣಾಮಲೈ ಹೇಳಿದರು.
ದ್ರಾವಿಡ ನೆಲದಲ್ಲಿ ಬಿಜೆಪಿ ಬೆಳೆಯುತ್ತಿದೆ: ಕೆ. ಅಣ್ಣಾಮಲೈ - ತಮಿಳು ನಾಡು ಬಿಜೆಪಿ ಪಕ್ಷ ಕುರಿತು ಅಣ್ಣಾಮಲೈ ಹೇಳಿಕೆ
ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳಿಗಿಂತ ಮೊದಲು ಕಾಂಗ್ರೆಸ್ ನೆಲೆ ಇತ್ತು. ನಂತರ ಪ್ರಾದೇಶಿಕ ಪಕ್ಷಗಳೇ ಸ್ಟ್ರಾಂಗ್ ಆದವು. ಈಗ ಪ್ರಾದೇಶಿಕ ಪಕ್ಷಗಳು ಮುಂಚೂಣಿಯಲ್ಲಿವೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿ ವಿಸ್ತಾರವಾಗಲಿದೆ ಎಂದು ತಮಿಳುನಾಡು ರಾಜ್ಯ ಉಪಾಧ್ಯಕ್ಷ ಕೆ. ಅಣ್ಣಾಮಲೈ ಭರವಸೆ ವ್ಯಕ್ತಪಡಿಸಿದರು.
ಅಣ್ಣಾಮಲೈ
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳಿಗಿಂತ ಮೊದಲು ಕಾಂಗ್ರೆಸ್ ನೆಲೆ ಇತ್ತು. ನಂತರ ಪ್ರಾದೇಶಿಕ ಪಕ್ಷಗಳೇ ಸ್ಟ್ರಾಂಗ್ ಆದವು. ಈಗ ಪ್ರಾದೇಶಿಕ ಪಕ್ಷಗಳು ಮುಂಚೂಣಿಯಲ್ಲಿವೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷ ಬಿಜೆಪಿ ವಿಸ್ತಾರವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಅವರು ತಮಿಳುನಾಡಿಗೆ ಹಲವು ಯೋಜನೆಗಳನ್ನು ನೀಡಿದ್ದಾರೆ. ಅವರ ಯೋಜನೆಗಳಿಂದ ಈಗಾಗಲೇ ಪಕ್ಷದತ್ತ ಯುವಕರು ಮುಖ ಮಾಡಿದ್ದಾರೆ ಎಂದು ತಿಳಿಸಿದರು.