ಮೈಸೂರು:ಯದುವಂಶಸ್ಥರ ಕುಡಿ ಆದ್ಯವೀರ ನರಸಿಂಹರಾಜ ಒಡೆಯರ್ ಎರಡನೇ ವಸಂತಕ್ಕೆ ಕಾಲಿಟ್ಟಿದ್ದು, ಅರಮನೆಯಲ್ಲಿ ವರ್ಧಂತಿ ಮಹೋತ್ಸವ ಆಚರಿಸಲಾಯಿತು.
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾಕುಮಾರಿ ಅವರ ಪುತ್ರ ಆದ್ಯವೀರ ಹುಟ್ಟುಹಬ್ಬವನ್ನು ಡಿ.5 ರಂದು ಆಚರಿಸಬೇಕಾಗಿತ್ತು. ಆದರೆ ಶುಭದಿನದ ಹಿನ್ನಲೆಯಲ್ಲಿ ಇಂದು ಬಾಲಕನ ಜನ್ಮದಿನವನ್ನು ಅಂಬಾವಿಲಾಸ ಅರಮನೆಯಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಮೊಮ್ಮಗನ ಹುಟ್ಟುಹಬ್ಬಕ್ಕೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಶುಭ ಕೋರಿದರು.
ಯುವರಾಜ ಚಿರಂಜೀವಿ ಶ್ರೀ ಆಧ್ಯವೀರ ನರಸಿಂಹರಾಜ ಒಡೆಯ ವರ್ಧಂತಿ ಮಹೋತ್ಸವ ಮೊಮ್ಮಗನಿಗೆ ಶುಭಕೋರಿದ ರಾಜಮಾತೆ ಪ್ರಮೋದಾದೇವಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಂತರ 60 ವರ್ಷಗಳ ಕಾಲ ಯದುವಂಶದಲ್ಲಿ ಸಂತಾನ ಭಾಗ್ಯವಾಗಿರಲಿಲ್ಲ. ಆದರೆ ಯದುವೀರ್ ಅವರನ್ನು ದತ್ತು ಪಡೆದು ವಿವಾಹ ಮಾಡಿದ ನಂತರ ಅರಮನೆಯಲ್ಲಿ ಮಗುವಿನ ನಗು ಕೇಳುತ್ತಿದೆ. ಸದ್ಯ ಮಗನ ಹುಟ್ಟುಹಬ್ಬದ ಸಂಭ್ರಮವನ್ನು ಯದುವೀರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಅಪ್ಪ ಅಪ್ಪನ ಮಡಿಲಲ್ಲಿ ಮೈಸೂರು ಯುವರಾಜ ಆದ್ಯವೀರ ''ಮೈಸೂರು ಅರಮನೆಯಲ್ಲಿ ಯುವರಾಜ ಚಿರಂಜೀವಿ ಶ್ರೀ ಆದ್ಯವೀರ ನರಸಿಂಹರಾಜ ಒಡೆಯ ವರ್ಧಂತಿ ಮಹೋತ್ಸವವನ್ನು ಆಚರಿಸಲಾಯಿತು. ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯು ಅವರಿಗೆ ಸಮಸ್ತ ಸನ್ಮಂಗಳವನ್ನುಂಟುಮಾಡಲಿ ಎಂದು ಪ್ರಾರ್ಥಿಸುತ್ತೇವೆ. ಚಿರಮಭಿವರ್ಧತಾಂ ಯದುಕುಲ ಸಂತಾನ ಶ್ರೀಃ'' ಎಂದು ಬರೆದುಕೊಂಡಿದ್ದಾರೆ.
ರಾಜನ ಜೊತೆ ಮುದ್ದು ಮೊಗದ ಯುವರಾಜನ ಪುಟ್ಟ ಪುಟ್ಟ ಹೆಜ್ಜೆ