ಕರ್ನಾಟಕ

karnataka

ETV Bharat / city

ಮೈಸೂರು: ಪೊಲೀಸ್ ವ್ಯಾನ್​​ಗೆ ದ್ವಿಚಕ್ರ ವಾಹನ ಡಿಕ್ಕಿ, ಸವಾರ ಪಾರು - ಬೈಕ್​ ಪೊಲೀಸ್ ವ್ಯಾನ್​​ ಆ್ಯಕ್ಸಿಡೆಂಟ್

ಕುಡಿದ ನಶೆಯಲ್ಲಿದ್ದ ದ್ವಿಚಕ್ರ ವಾಹನ ಸವಾರ ಪೊಲೀಸ್ ವ್ಯಾನ್​​ಗೆ ಡಿಕ್ಕಿ ಹೊಡೆದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.

bike collided with a police van in mysore
ಪೊಲೀಸ್ ವ್ಯಾನ್​​ಗೆ ಡಿಕ್ಕಿ ಹೊಡೆದ ದ್ವಿಚಕ್ರ ವಾಹನ

By

Published : Feb 17, 2022, 9:17 AM IST

Updated : Feb 17, 2022, 12:34 PM IST

ಮೈಸೂರು: ಮದ್ಯದ ಮತ್ತಿನಲ್ಲಿ ದ್ವಿಚಕ್ರ ವಾಹನ ಸವಾರ ಪೊಲೀಸ್ ವ್ಯಾನ್​​ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಪೊಲೀಸ್ ವ್ಯಾನ್ ಕೆಳಗೆ ಸಿಲುಕಿಕೊಂಡಿದೆ. ಅದೃಷ್ಟವಶಾತ್​​ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆ ‌ಮೈಸೂರಿನ ಜಲದರ್ಶಿನಿ ಸಮೀಪ ಬುಧವಾರ ರಾತ್ರಿ ನಡೆದಿದೆ.


ನಗರದಿಂದ ಹುಣಸೂರು ರಸ್ತೆ ಮೂಲಕ ತೆರಳುತ್ತಿದ್ದ ಸಿಎಆರ್ ಪೊಲೀಸ್ ವಾಹನ ಜಲದರ್ಶಿನಿಗೆ ಪ್ರವೇಶಿಸಲು ಮುಂದಾಗಿದೆ. ಇದೇ ವೇಳೆ ದ್ವಿಚಕ್ರ ವಾಹನ ಸವಾರ ಮೊಬೈಲ್​​ನಲ್ಲಿ ಮಾತನಾಡುತ್ತಾ ಬರುತ್ತಿದ್ದನೆಂದು ಹೇಳಲಾಗಿದ್ದು, ನಿಯಂತ್ರಣ ತಪ್ಪಿ ಸಿಎಆರ್ ವ್ಯಾನ್​​ಗೆ ಗುದ್ದಿದ್ದಾನೆ. ಸುಮಾರು 50 ಅಡಿ ದೂರ ದ್ವಿಚಕ್ರವಾಹನ ನೆಲದಲ್ಲೇ ಜಾರಿಕೊಂಡು ಬಂದು ಪೊಲೀಸ್ ವಾಹನದ ಕೆಳಗೆ ಸಿಲುಕಿಕೊಂಡಿದೆ.

ಇದನ್ನೂ ಓದಿ:ಮದ್ಯ ಸೇವನೆಗೆ ಹಣ ಹೊಂದಿಸಲು ಕಳ್ಳತನ, ಕುಡುಕನ ಬಂಧನ

ದ್ವಿಚಕ್ರವಾಹನ ಸವಾರ ಪಾನಮತ್ತನಾಗಿದ್ದನೆಂದು ಸ್ಥಳೀಯರು ಆರೋಪಿಸಿದ್ದಾರೆ. ಆತನನ್ನು ವಿವಿ ಪುರಂ ಸಂಚಾರಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Last Updated : Feb 17, 2022, 12:34 PM IST

ABOUT THE AUTHOR

...view details