ಮೈಸೂರು:ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಡ್ ಅನ್ನು ಜಿಲ್ಲೆಯ ಎಲ್ಲ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ನಾಗರಿಕರು ಕಡ್ಡಾಯವಾಗಿ ನವೀಕರಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೆಂಕಟೇಶ್ ಹೇಳಿದರು.
ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ತಾಲೂಕುಗಳಲ್ಲಿ ಶಿಬಿರಗಳನ್ನು ನಿರ್ಮಿಸಿ ಕಾರ್ಡ್‍ಗಳನ್ನು ನೀಡಲಾಗುವುದು. ಖಾಸಗಿ ಸೇವಾ ಸಿಂಧು ಕೇಂದ್ರಗಳ (common Service center) ಮೂಲಕ ₹10 ಶುಲ್ಕದೊಂದಿಗೆ ಬಿಳಿಯ ಹಾಳೆ ಹಾಗೂ ₹ 35 ಶುಲ್ಕ ನೀಡಿ ಎಆರ್ಕೆ-ಪಿವಿಸಿ ಕಾರ್ಡ್ ಪಡೆಯಬಹುದು ಎಂದರು.
ಕಾರ್ಡ್ ಪಡೆಯುವಾಗ ಸೇವಾ ಕೇಂದ್ರಗಳಲ್ಲಿ ಅಧಿಕವಾಗಿ ಹಣ ಕೇಳಿದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಬೇಕು. ಹೆಚ್ಚಿನ ಮಾಹಿತಿಗೆ 104 ಅಥವಾ 1800 4258330, 7259003400, 9449843060 ಸಂಖ್ಯೆಗಳಿಗೆ ಸಂಪರ್ಕಿಸಬಹುದು. ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಶೇ.30ರಷ್ಟು ಸರ್ಕಾರವೇ ಆರೋಗ್ಯದ ವೆಚ್ಚ ಭರಿಸಲಿದೆ. ಬಿಪಿಎಲ್ ಕಾರ್ಡ್ ಬಳಕೆದಾರರಿಗೆ ಉಚಿತ ಚಿಕಿತ್ಸೆ ದೊರೆಯಲಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.60ರಷ್ಟು ಸೌಲಭ್ಯಗಳು ಸಿಗಲಿದೆ ಎಂದು ಹೇಳಿದರು.