ಕರ್ನಾಟಕ

karnataka

ETV Bharat / city

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೆಎಂಎಫ್‌ನಿಂದ ಆಯುರ್ವೇದಿಕ್ ಹಾಲು ಬಿಡುಗಡೆ - ಕೆಎಂಎಫ್‌ನಿಂದ ಆಯುರ್ವೇದಿಕ್ ಹಾಲು ಬಿಡುಗಡೆ

ಕಷಾಯ, ಶುಂಠಿ, ತುಳಸಿ, ಅಶ್ವಗಂಧ, ಕಾಳಮೆಣಸು, ಲವಂಗ, ಅರಿಶಿಣದ ಮಹತ್ವ ಎಲ್ಲರಿಗೂ ಗೊತ್ತು. ಇದು ಆರೋಗ್ಯಕರವಾದ ಉತ್ಪನ್ನವಾಗಿರುವುದರಿಂದ ಜನರಿಗೆ ಸುಲಭವಾಗಿ ಸಿಗಬೇಕಿದೆ. ಆರೋಗ್ಯಕರವಾದ ನಂದಿನಿ ಉತ್ಪನ್ನಗಳ ಬಳಕೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಲಿದೆ..

Mysore
ಕೆಎಂಎಫ್‌ನಿಂದ ಆಯುರ್ವೇದಿಕ್ ಹಾಲು ಬಿಡುಗಡೆ

By

Published : Apr 30, 2021, 1:33 PM IST

ಮೈಸೂರು : ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೆಎಂಎಫ್‌ನಿಂದ ಆಯುರ್ವೇದಿಕ್ ಹಾಲು ಬಿಡುಗಡೆ ಮಾಡಲಾಗಿದೆ ಎಂದು ಮೈಮುಲ್ ಅಧ್ಯಕ್ಷ ಪಿ‌.ಎಂ.ಪ್ರಸನ್ನ ಹೇಳಿದರು.

ಕೆಎಂಎಫ್‌ನಿಂದ ಆಯುರ್ವೇದಿಕ್ ಹಾಲು ಬಿಡುಗಡೆ..

ಮೈಮುಲ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಔಷಧಿ ಗುಣಗಳುಳ್ಳ ಹಾಲು ಉತ್ಪದಿಸಲಾಗಿದೆ.

ಶುಂಠಿ, ತುಳಸಿ, ಅಶ್ವಗಂಧ, ಕಾಳಮೆಣಸು, ಲವಂಗ, ಅರಿಶಿಣದ ಹಾಲನ್ನು ಕೆಎಂಎಫ್‌ನಿಂದ ಮೈಸೂರಿನಲ್ಲಿ ಬಿಡುಗಡೆ ಮಾಡಲಾಗಿದೆ ಎಂದರು.

200 ಮೀ. ಲೀ ಬಾಟೆಲ್​​ಗಳಲ್ಲಿ ಆಯುರ್ವೇದ್ ಹಾಲು ಲಭ್ಯವಿದ್ದು, 6 ತಿಂಗಳುಗಳವರೆಗೆ ಬಳಸಬಹುದು. ಕೇವಲ 20 ರೂಪಾಯಿಗೆ ನಂದಿನಿ ಬೂತ್‌ಗಳಲ್ಲಿ ಆಯುರ್ವೇದಿಕ್ ಹಾಲು ಲಭ್ಯವಾಗಲಿದೆ ಎಂದರು.

ಎಲ್ಲೆಡೆ ಕೊರೊನಾ ಹರಡುವಿಕೆ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ಜನರು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಆರೋಗ್ಯಕರವಾದ ಉತ್ಪನ್ನಗಳನ್ನ ನೀಡುವ ಸಲುವಾಗಿ ಆಯುರ್ವೇದಿಕ ಗುಣಗಳ್ಳುಳ್ಳ ಪ್ರೊಟೀನ್ ಮಿಲ್ಕ್ ಹೊರ ತಂದಿದ್ದೇವೆ ಎಂದು ಹೇಳಿದರು.

ಕಷಾಯ, ಶುಂಠಿ, ತುಳಸಿ, ಅಶ್ವಗಂಧ, ಕಾಳಮೆಣಸು, ಲವಂಗ, ಅರಿಶಿಣದ ಮಹತ್ವ ಎಲ್ಲರಿಗೂ ಗೊತ್ತು. ಇದು ಆರೋಗ್ಯಕರವಾದ ಉತ್ಪನ್ನವಾಗಿರುವುದರಿಂದ ಜನರಿಗೆ ಸುಲಭವಾಗಿ ಸಿಗಬೇಕಿದೆ. ಆರೋಗ್ಯಕರವಾದ ನಂದಿನಿ ಉತ್ಪನ್ನಗಳ ಬಳಕೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಲಿದೆ ಎಂದರು‌.

ಓದಿ:ರಾಮನಗರ ನಗರಸಭೆ ಚುನಾವಣೆ: ಭಾರೀ ಮತಗಳಿಂದ ಗೆದ್ದ ಕೋವಿಡ್​ಗೆ ಬಲಿಯಾದ ಅಭ್ಯರ್ಥಿ!

ABOUT THE AUTHOR

...view details