ಕರ್ನಾಟಕ

karnataka

ETV Bharat / city

ಪ್ರಯಾಣಿಕರಿಲ್ಲದೇ ಮೈಸೂರಿನಲ್ಲಿ ಆಟೋ ಚಾಲಕರ ಪರದಾಟ - ಮೈಸೂರಿನದ್ಯಾಂತ ಬೆರಳೆಣಿಕೆಯಷ್ಟು ಆಟೋ

ಲಾಕ್​​​​​ಡೌನ್ ಸಡಿಲಿಕೆಯಾದರೂ ಮೈಸೂರಿನಲ್ಲಿ ಆಟೋ ಚಾಲಕರು ಪ್ರಯಾಣಿಕರಿಲ್ಲದೇ ಪರದಾಡುವಂತಾಗಿದೆ.

auto drivers hassle in Mysore with no passengers
ಲಾಕ್ ಡೌನ್ ಸಡಿಲಿಕೆ, ಪ್ರಯಾಣಿಕರಿಲ್ಲದೇ ಮೈಸೂರಿನಲ್ಲಿ ಆಟೋ ಚಾಲಕರ ಪರದಾಟ

By

Published : May 20, 2020, 10:09 PM IST

ಮೈಸೂರು: ಲಾಕ್​​​ಡೌನ್​​​​ ಸಡಿಲಿಕೆಯಿಂದ ಆಟೋಗಳ ಸಂಚಾರಕ್ಕೆ ಅನುಮತಿ ಕೊಟ್ಟಿದ್ದರು, ಪ್ರಯಾಣಿಕರಿಲ್ಲದೇ ಚಾಲಕರು ಪರದಾಡುವಂತಾಗಿದೆ.

ಪ್ರಯಾಣಿಕರಿಲ್ಲದೇ ಆಟೋಗಳು ಸ್ಟ್ಯಾಂಡ್ ನಲ್ಲಿಯೇ ನಿಂತುಕೊಂಡಿದ್ದು, ಮಹಾಮಾರಿ ಕೊರೊನಾ ದಿಂದ ಭಯಭೀತರಾಗಿರುವ ಪ್ರಯಾಣಿಕರು ಆಟೋಗಳ ಬಳಿ ಬರುವುದನ್ನು ಕಡಿಮೆ ಮಾಡಿದ್ದಾರೆ. ಆದರೆ, ಪ್ರಯಾಣಿಕರು ಬರುತ್ತಾರೆ ಎಂಬ ಉತ್ಸುಕದಲ್ಲಿದ್ದ ಆಟೋ ಚಾಲಕರಿಗೆ ಭಾರೀ ನಿರಾಸೆಯಾಗಿದೆ.

ಸಾಕಷ್ಟು ಸಮಸ್ಯೆಗಳು, ನೋವಿನ ನಡುವೆ ಆಟೋಗಳ ಸೇವೆ ಆರಂಭವಾಗಿದೆ. ಮೈಸೂರಿನದ್ಯಾಂತ ಬೆರಳೆಣಿಕೆಯಷ್ಟು ಆಟೋಗಳು ರಸ್ತೆಗಿಳಿದಿವೆ. ಲಾಕ್​​ಡೌನ್​​​​ ಸಡಿಲಿಕೆಯಾದ್ರೂ ಪ್ರಯಾಣಿಕರು ಮಾತ್ರ ಬರುತ್ತಿಲ್ಲ. ನಮ್ಮ ಸಮಸ್ಯೆಗಳನ್ನೂ ಸಹ ಬಗೆ ಹರಿಸಬೇಕು ಎಂಬುದು ಚಾಲಕರ ಒತ್ತಾಯವಾಗಿದೆ.

ABOUT THE AUTHOR

...view details