ಕರ್ನಾಟಕ

karnataka

ETV Bharat / city

ಕೊರೊನಾ ತಂದ ಆರ್ಥಿಕ ಸಂಕಷ್ಟ: ಆತ್ಮಹತ್ಯೆ ಮಾಡಿಕೊಂಡ ಆಟೋ ಚಾಲಕ - ಮೈಸೂರು ಜಿಲ್ಲೆಯ ಸಾತಗಳ್ಳಿ

ಮೈಸೂರು ಜಿಲ್ಲೆಯ ಸಾತಗಳ್ಳಿ ಬಡಾವಣೆಯ ಅಂಬೇಡ್ಕರ್ ಕಾಲೋನಿಯ ಆಟೋ ಚಾಲಕನೋರ್ವ ಕೊರೊನಾ ಹಿನ್ನೆಲೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆಟೋ ಚಾಲಕ
ಆಟೋ ಚಾಲಕ

By

Published : Dec 18, 2020, 5:23 PM IST

ಮೈಸೂರು: ಕೊರೊನಾ ಹಿನ್ನೆಲೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಆಟೋ ಚಾಲಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಸಾತಗಳ್ಳಿ ಬಡಾವಣೆಯ ಅಂಬೇಡ್ಕರ್ ಕಾಲೋನಿಯಲ್ಲಿ ನಡೆದಿದೆ.

ಸಿರಾಜುದ್ದೀನ್ (30) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ತನ್ನ ಪತ್ನಿಯನ್ನು ತವರು ಮನೆಗೆ ಕಳುಹಿಸಿ ನೇಣಿಗೆ ಶರಣಾಗಿದ್ದಾನೆ. ಸಿರಾಜುದ್ದೀನ್ ಎರಡನೇ ಮದುವೆ ಮಾಡಿಕೊಂಡು, ಮೂರು ಮಕ್ಕಳ ಜವಾಬ್ದಾರಿ ಹೊತ್ತುಕೊಂಡಿದ್ದ. ಆದರೆ ಕೊರೊನಾ ಹಿನ್ನೆಲೆ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದ್ದು, ಮನನೊಂದು ಸಾವಿಗೆ ಶರಣಾಗಿದ್ದಾನೆ.

ಮಗುವಿನ ಹುಟ್ಟುಹಬ್ಬವನ್ನು ಆಚರಿಸಲು ಪತ್ನಿ ಬೇಬಿ ಆಯಿಷಾಳನ್ನು ನಿನ್ನೆ ತವರು ಮನೆಗೆ ಕಳುಹಿಸಿದ್ದ ಸಿರಾಜುದ್ದೀನ್, ಇಂದು ಬೆಳಗ್ಗೆ ಪತ್ನಿ ಮನೆಗೆ ವಾಪಸ್ ಬರುವ ಮೊದಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಈ ಸಂಬಂಧ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details