ಕರ್ನಾಟಕ

karnataka

ETV Bharat / city

ಬಡವರಿಗೆ ಉಚಿತ ತರಕಾರಿ ನೀಡಲು ಮುಂದಾದ ತರಕಾರಿ ದಲ್ಲಾಳಿಗಳ ಸಂಘ - Association of Vegetable Brokers

ಕೋವಿಡ್-19 ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಂದ ತರಕಾರಿ ಕೊಳ್ಳಲು ಬರುವ ಲಾರಿಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ವ್ಯರ್ಥವಾಗಿ ತರಕಾರಿಗಳನ್ನು ಬೀದಿಗೆ ಬಿಸಾಡುವ ಬದಲು ಬಡವರಿಗೆ ನೀಡಲು ತರಕಾರಿ ದಲ್ಲಾಳರ ಸಂಘ ಮುಂದಾಗಿದೆ.

Association of Vegetable Brokers, which provides free vegetables to the poor
ಬಡವರಿಗೆ ಉಚಿತ ತರಕಾರಿ ನೀಡಲು ಮುಂದಾದ ತರಕಾರಿ ದಲ್ಲಾಳರ ಸಂಘ

By

Published : Apr 2, 2020, 10:31 PM IST

ಮೈಸೂರು: ಕೋವಿಡ್-19 ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಂದ ತರಕಾರಿ ಕೊಳ್ಳಲು ಬರುವ ಲಾರಿಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ವ್ಯರ್ಥವಾಗಿ ತರಕಾರಿಗಳನ್ನು ಬೀದಿಗೆ ಬಿಸಾಡುವ ಬದಲು ಬಡವರಿಗೆ ನೀಡಲು ತರಕಾರಿ ದಲ್ಲಾಳರ ಸಂಘ ಮುಂದಾಗಿದೆ.

ಬಡವರಿಗೆ ಉಚಿತ ತರಕಾರಿ ನೀಡಲು ಮುಂದಾದ ತರಕಾರಿ ದಲ್ಲಾಳರ ಸಂಘ

ಮೈಸೂರಿನ ಕಡಕೊಳ ಕೈಗಾರಿಕಾ ಪ್ರದೇಶದಲ್ಲಿ ಜುಬಲಿಯಂಟ್ ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿರುವ ನೌಕರರ ಪೈಕಿ 17 ಮಂದಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನಂಜನಗೂಡು ಪಟ್ಟಣಕ್ಕೆ ರಸ್ತೆ ಸಂಚಾರ ಬಂದ್ ಮಾಡಲಾಗಿದೆ. ಹಾಗಾಗಿ ಮೈಸೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಹೊರ ರಾಜ್ಯಗಳಿಂದ ಬರುವ ಲಾರಿಗಳ ಸಂಖ್ಯೆ ಗಣನೀಯವಾಗಿ ಕುಸಿಯತೊಡಗಿದೆ. ಸ್ಥಳೀಯರು ಹಾಗೂ ಮೈಸೂರು ಭಾಗದ ಕೆಲ ರೈತರು ಎಪಿಎಂಸಿಗೆ ತೆಗೆದುಕೊಂಡು ಬರುತ್ತಿದ್ದ ತರಕಾರಿಗಳು ಹೊರ ರಾಜ್ಯಗಳಿಗೆ ಹೋಗದೆ ಕೊಳೆಯತೊಡಗಿದೆ.

ವರ್ತಕರು ತಮಗೆ ನಷ್ಟವಾಗಲಿದೆ ಎಂಬ ಉದ್ದೇಶದಿಂದ ರೈತರಿಂದ ತರಕಾರಿ ಕೊಳ್ಳಲು ಮುಂದಾಗುತ್ತಿಲ್ಲ. ಇದರಿಂದ ಲಾರಿ, ಗೂಡ್ಸ್ ಆಟೋ ಹಾಗೂ ಇತರೆ ವಾಹನಗಳಲ್ಲಿ ತರಕಾರಿಗಳನ್ನು ಹೊತ್ತು ತರುವ ರೈತರು, ಮನೆಗೆ ವಾಪಸ್ ತೆಗೆದುಕೊಂಡು ಹೋಗಲಾಗದೆ ಅಸಮಾಧಾನದಿಂದ ಅಲ್ಲಿಯೇ ಬಿಸಾಡಿ ತೆರಳುತ್ತಿದ್ದರು. ಮೂರು ದಿನಗಳಿಂದ ಐದಾರು ಸಾವಿರ ಕೆಜಿಯಷ್ಟು ತರಕಾರಿ ಪ್ರತಿನಿತ್ಯ ಕೊಳೆತು ಹೋಗುತ್ತಿರುವುದನ್ನು ನೋಡಿದ ತರಕಾರಿ ದಲ್ಲಾಳರ ಸಂಘದ ಅಧ್ಯಕ್ಷ ಹಾಗೂ ದಲ್ಲಾಳರು, ತರಕಾರಿಯನ್ನು ವ್ಯರ್ಥವಾಗಿ ಸುರಿಯಲು ಬರುವ ರೈತರ ಮನವೊಲಿಸಿ ಅವರಿಗೆ ಸ್ವಲ್ಪ ಹಣ ನೀಡಿ ಖರೀದಿ ಮಾಡಿ ನಂತರ ಎಪಿಎಂಸಿ ಆವರಣದಲ್ಲಿ ವಾಹನಗಳಿಗೆ ತರಕಾರಿ ತುಂಬಿಸಿಕೊಂಡು ಸ್ಲಂ ಪ್ರದೇಶಗಳಿಗೆ ತೆರಳಿ ವಿತರಿಸಲಾಗ್ತಿದೆ.

ABOUT THE AUTHOR

...view details