ಕರ್ನಾಟಕ

karnataka

ETV Bharat / city

ಉಪವಾಸ ಸತ್ಯಾಗ್ರಹ: ಐವರು ಅಂಗನವಾಡಿ ಕಾರ್ಯಕರ್ತೆಯರು ಅಸ್ವಸ್ಥ - nanjangud anganawadi workers protest

ನಂಜನಗೂಡು ತಾಲ್ಲೂಕಿನ ಮಿನಿ ವಿಧಾನಸೌಧದ ಮುಂದೆ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

anganawadi-workers-protest-in-nanjanagudu-mysore
ಅಂಗನವಾಡಿ ಕಾರ್ಯಕರ್ತೆಯರು

By

Published : Mar 15, 2021, 5:34 PM IST

ಮೈಸೂರು: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹದಲ್ಲಿ ಐವರು ಅಂಗನವಾಡಿ ಕಾರ್ಯಕರ್ತೆಯರು ಅಸ್ವಸ್ಥಗೊಂಡ ಘಟನೆ ನಂಜನಗೂಡು ತಾಲ್ಲೂಕಿನಲ್ಲಿ ನಡೆದಿದೆ.

ಉಪವಾಸ ಸತ್ಯಾಗ್ರಹ ವೇಳೆ ಅಸ್ವಸ್ಥಗೊಂಡ ಐವರು ಅಂಗನವಾಡಿ ಕಾರ್ಯಕರ್ತೆಯರು

ನಂಜನಗೂಡು ತಾಲ್ಲೂಕಿನ ಮಿನಿ ವಿಧಾನಸೌಧದ ಮುಂದೆ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಈ ವೇಳೆ ಐವರು ಅಂಗನವಾಡಿ ಕಾರ್ಯಕರ್ತೆಯರು ಅಸ್ವಸ್ಥಗೊಂಡಿದ್ದು, ಆಂಬ್ಯುಲೆನ್ಸ್​ನಲ್ಲಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಯಿತು.

ರಾಜ್ಯ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಬೇಡಿಕೆಗಳನ್ನು ಈಡೇರಿಸುವಲ್ಲಿ ಆಸಕ್ತಿ ತೋರುತ್ತಿಲ್ಲವೆಂದು ನೊಂದ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದರು.

ABOUT THE AUTHOR

...view details