ಮೈಸೂರು:ನಿವೇಶನ ಒತ್ತುವರಿ ವಿಚಾರವಾಗಿ ಮಾತಿನ ಚಕಮಕಿ ನಡೆದು, ಒತ್ತುವರಿದಾರರು ಮಹಿಳೆಯರು ಹಾಗೂ ಅಂಗವಿಕಲನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹುಣಸೂರು ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಹುಣಸೂರಿನ ಕಲ್ಕುಣಿಕೆ ಮೂರೂರಮ್ಮ ಕಾಲೋನಿಯ ನಿವಾಸಿ ಅಂಗವಿಕಲ ಸೋಮ ಕುಮಾರ್, ರಾಜೇಶ್ವರಿ ಎನ್ನುವವರ ಮೇಲೆ ಕೆಂಪರಾಜು, ಪುಟ್ಟನಂಜಯ್ಯ ಎಂಬುವವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ನಿವೇಶನ ಒತ್ತುವರಿ ವಿಚಾರಕ್ಕೆ ಗಲಾಟೆ: ಮಹಿಳೆಯರ ಮೇಲೆ ಹಲ್ಲೆ ಆರೋಪ - allegation of assaulting woman in mysore
ಒತ್ತುವರಿದಾರರು ಮಹಿಳೆಯರು ಹಾಗೂ ಅಂಗವಿಕಲನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನಿವೇಶನ ಒತ್ತುವರಿ ವಿಚಾರವಾಗಿ ಮಾತಿನ ಚಕಮಕಿ
ಪುಟ್ಟನಂಜಯ್ಯ, ಕೆಂಪರಾಜು ಎಂಬುವವರು ನಿವೇಶನ ಒತ್ತುವರಿ ಮಾಡಿದ್ದು, ಸೋಮ ಕುಮಾರ್, ರಾಜೇಶ್ವರಿ ಹಾಗೂ ಇನ್ನಿತರ ಐದು ಕುಟುಂಬ ಸೇರಿ ಸರ್ಕಾರಿ ಸರ್ವೇ ನಡೆಸಿ ಒತ್ತುವರಿ ಜಾಗವನ್ನು ಬಿಟ್ಟು ಕೊಡಲು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಪುಟ್ಟನಂಜಯ್ಯ, ಕೆಂಪರಾಜು ಉಡಾಫೆಯಿಂದ ನಾನು ಬಿಟ್ಟು ಕೊಡುವುದಿಲ್ಲ ಎಂದು ಏಕಾಏಕಿ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ:ಬೆಳ್ಳಿ ಕಾಲ್ಗೆಜ್ಜೆಗೆ ಬಾಲಕಿ ಕೊಂದು ಶವ ಮರಳಲ್ಲಿ ಹೂತಿಟ್ಟ ಮಹಿಳೆ