ಮೈಸೂರು: ಕೊರೊನಾ ಸೋಂಕಿತರು ಹೆಚ್ಚಾಗಲು ಕಾರಣವಾಗಿರುವ ಜುಬಿಲಂಟ್ ಕಾರ್ಖಾನೆಗೆ ಅಪರಾಧ ಮತ್ತು ತಾಂತ್ರಿಕ ಸೇವೆಗಳ ವಿಭಾಗದ ಎಡಿಜಿಪಿ ಡಾ. ಪರಶಿವಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜುಬಿಲಂಟ್ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಎಡಿಜಿಪಿ ಪರಶಿವಮೂರ್ತಿ - ಎಡಿಜಿಪಿ ಡಾ.ಪರಶಿವಮೂರ್ತಿ
ಅಪರಾಧ ಮತ್ತು ತಾಂತ್ರಿಕ ಸೇವೆಗಳ ವಿಭಾಗದ ಎಡಿಜಿಪಿ ಡಾ. ಪರಶಿವಮೂರ್ತಿ, ಕೊರೊನಾ ಸೋಂಕಿತರು ಹೆಚ್ಚಾಗಲು ಕಾರಣವಾಗಿರುವ ಜುಬಿಲಂಟ್ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ಜುಬಿಲಿಯಂಟ್ ಕಾರ್ಖಾನೆಗೆ ಭೇಟಿ ನೀಡಿ,ಪರಿಶೀಲನೆ ನಡೆಸಿದ ಎಡಿಜಿಪಿ ಡಾ.ಪರಶಿವಮೂರ್ತಿ
ಜುಬಿಲಂಟ್ ಕಾರ್ಖಾನೆಗೆ ಬಂದಿದ್ದ ಕಂಟೈನರ್ನಿಂದ ಸೋಂಕು ಬಂದಿದೆ ಎಂಬುವುದು ನೆಗೆಟಿವ್ ಆದ ಬಳಿಕ ಕಾರ್ಖಾನೆಯಲ್ಲಿ ಹೇಗೆ ಸೋಂಕು ಕಾಣಿಸಿಕೊಂಡಿತು. ಮೊದಲ ವ್ಯಕ್ತಿಯ ಹೇಳಿಕೆ ಆಧಾರದ ಮೇಲೆ ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಲಾಗಿದೆ. ಅಲ್ಲಿಂದ ನಂಜನಗೂಡು ಕೈಗಾರಿಕಾ ಪ್ರದೇಶ ಪರಿಶೀಲನೆ ಮಾಡಿ, ನಂಜನಗೂಡು ಪಟ್ಟಣದಲ್ಲಿರುವ ಹೋಂ ಕ್ವಾರಂಟೈನ್ ಸ್ಥಳಕ್ಕೆ ಭೇಟಿ ಕೊಟ್ಟು ವಿವರಣೆ ಪಡೆದರು.
ಬಳಿಕ ಮೊರಾರ್ಜಿ ಶಾಲೆಗೆ ತೆರಳಿ ಹೋಂ ಕ್ವಾರಂಟೈನ್ನಲ್ಲಿರುವ ವ್ಯಕ್ತಿಗಳ ಮಾಹಿತಿ ಪಡೆದರು. ಅಲ್ಲದೇ, ಶಾಸಕ ಹರ್ಷವರ್ಧನ್ ಅವರೊಟ್ಟಿಗೆ ಚರ್ಚೆ ನಡೆಸಿದರು.