ಕರ್ನಾಟಕ

karnataka

ETV Bharat / city

ಮಾಸ್ಟರ್​ ಪ್ಲ್ಯಾನ್ ರೂಪಿಸಿ ಚಾಲೆಂಜಿಂಗ್​ ಸ್ಟಾರ್​​ ಕೈಗೆ ಸಿಕ್ಕಿಬಿದ್ದ 'ಕುಮಾರಿ' ಯಾರು ಗೊತ್ತೇ? - ನಟ ದರ್ಶನ್​ ನಕಲಿ ಬ್ಯಾಂಕ್​ ಮ್ಯಾನೇಜರ್​ ಪ್ರಕರಣ

ಅರುಣಾಕುಮಾರಿಯ ವಂಚನೆ ಇತಿಹಾಸ ಒಂದಾ ಎರಡಾ. ಗಂಡನಿಂದ ಬೇರೆಯಾದ ಮೇಲೆ ಬ್ಯಾಂಕ್​ನಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಈ ಪ್ರಕರಣದ 2ನೇ ಆರೋಪಿ ಮಧುಕೇಶ್‌ನಿಂದಲೂ 2 ಲಕ್ಷ ರೂ. ಪಡೆದು ಆತನಿಗೂ ವಂಚಿಸಿದ್ದಳು. ಜೊತೆಗೆ ಆತನನ್ನು ಮದುವೆಯಾಗುವುದಾಗಿಯೂ ಭರವಸೆ ನೀಡಿದ್ದಳು - ನಟ ದರ್ಶನ್‌

actor-darshan-loan-cheating-case-accused-history
ನಟ ದರ್ಶನ್​ ಸಾಲ ವಂಚನೆ ಪ್ರಕರಣ

By

Published : Jul 12, 2021, 5:10 PM IST

Updated : Jul 13, 2021, 7:01 PM IST

ಮೈಸೂರು: ನಟ ದರ್ಶನ್ ಆಸ್ತಿ ಪತ್ರ ಮತ್ತು ಸಹಿ ನಕಲು ಮಾಡಿ, ಅದರ ಆಧಾರದ ಮೇಲೆ ಬ್ಯಾಂಕಿನಲ್ಲಿ 25 ಕೋಟಿ ರೂ ಸಾಲಕ್ಕಾಗಿ ಅರ್ಜಿ ಸಲ್ಲಿಸಿ ಹಣ ಹೊಡೆಯಲು ನೋಡಿದ್ದ ಆರೋಪಿ ಅರುಣಾಕುಮಾರಿ ಬಗ್ಗೆ ನಟ ದರ್ಶನ್​ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬ್ಯಾಂಕ್​ ಮ್ಯಾನೇಜರ್​ ಎಂದು ಚಳ್ಳೆಹಣ್ಣು ತಿನ್ನಿಸಲು ಬಂದ ಅರುಣಾಕುಮಾರಿ, ಸೋಷಿಯಲ್ ಕ್ಲಬ್​ನಲ್ಲಿ ಸೆಕ್ಯೂರಿಟಿ ಕೆಲಸ ಮಾಡುವ ಕುಮಾರ್ ಎಂಬುವರ ಪತ್ನಿ. ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿರುವ ಈಕೆ ಕಳೆದ 4-5 ವರ್ಷಗಳಿಂದ ಗಂಡನಿಂದ ಬೇರೆಯಾಗಿದ್ದಳು. ನಿರ್ಮಾಪಕ ಉಮಾಪತಿಯವರು ದರ್ಶನ್​ಗೆ ವಂಚನೆ ಮಾಡಲು ಹೇಳಿದ್ದರು ಎಂದು ಈಕೆಯೇ ಆಡಿಯೋ ಸಂಭಾಷಣೆಯಲ್ಲಿ ತಿಳಿಸಿದ್ದಳು. ಆ ಆಡಿಯೋವನ್ನು ಸ್ವತಃ ದರ್ಶನ್ ಅವರೇ ಪತ್ರಿಕಾಗೋಷ್ಠಿಯಲ್ಲಿ‌ ಕೇಳಿಸಿ ಆಕೆಯ ಪತಿ‌ ಕುಮಾರ್‌ನಿಂದ ಹೇಳಿಕೆಯನ್ನು ಸಹ ಕೊಡಿಸಿದರು.

ಇದನ್ನೂಓದಿ: ನಟ ದರ್ಶನ್​ ಹೆಸರಲ್ಲಿ ವಂಚನೆ ಪ್ರಕರಣ : ಜಯನಗರ ಠಾಣೆಯಲ್ಲಿ ನಿರ್ಮಾಪಕ ಉಮಾಪತಿ ದೂರು ವಜಾ

ಕುಮಾರಿಯ ವಂಚನೆ ಇತಿಹಾಸ ಒಂದಾ ಎರಡಾ.. ಗಂಡನಿಂದ ಬೇರೆಯಾದ ಮೇಲೆ ಬ್ಯಾಂಕ್​ನಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಈ ಪ್ರಕರಣದ 2ನೇ ಆರೋಪಿ ಮಧುಕೇಶ್ ಅವರಿಂದಲೂ 2 ಲಕ್ಷ ರೂ. ಹಣ ಪಡೆದು ಆತನಿಗೂ ವಂಚಿಸಿದ್ದಾಳೆ. ಜೊತೆಗೆ ಆತನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದಳು ಎಂದು ಸುದ್ದಿಗೋಷ್ಠಿಯಲ್ಲಿ ದರ್ಶನ್, ಅರುಣಾ ಕುಮಾರಿಯ ಮೋಸದ ಜಾಲಗಳ ಬಗ್ಗೆ ತಿಳಿಸಿದರು.

ಮೂವರು ಪೊಲೀಸ್ ವಶಕ್ಕೆ

ಈ ಪ್ರಕರಣಕ್ಕೆ ಸಂಬಂಧಿಸಿ ಹೆಬ್ಬಾಳ ಪೊಲೀಸ್​ ಠಾಣೆಯಲ್ಲಿ ನಟ ದರ್ಶನ್​ ಅವರ ಸ್ನೇಹಿತ ಹರ್ಷ ಮಲೇಂಟಾ ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ಈ ಮಧ್ಯೆ ಹಿಂದಿನ ಮಾಧ್ಯಮಗೋಷ್ಠಿಯಲ್ಲಿ ದರ್ಶನ್, ಪ್ರಕರಣದಲ್ಲಿ‌ ಉಮಾಪತಿ ಪಾತ್ರದ ಜೊತೆಗೆ ಅರುಣ್ ಕುಮಾರಿ ಪಾತ್ರದ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಹೇಳಿದ್ದು, ಪೊಲೀಸ್​ ತನಿಖೆಯಲ್ಲಿ ಮತ್ತಷ್ಟು ಮಾಹಿತಿ ಬಹಿರಂಗವಾಗಲಿದೆ.

Last Updated : Jul 13, 2021, 7:01 PM IST

ABOUT THE AUTHOR

...view details